
ಕಲಬುರಗಿ,ನ.21-ನಗರದ ಅಮಿತ್ ಪಾಟೀಲ್ ಸೆಂಟ್ರಲ್ ಶಾಲೆ (ಸಿಬಿಎಸ್‍ಇ)ಯಲ್ಲಿ ಇಂದು ಜೂನಿಯರ್ ವಾರ್ಷಿಕ ಕ್ರೀಡಾಕೂಟ ಆಚರಿಸಲಾಯಿತು.
ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಜಿಐಎಂಎಸ್‍ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶೀತಲ್ ಕೋರವಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ಅಧ್ಯಕ್ಷರಾದ ಡಾ.ಬಿ.ಜಿ.ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೈಲಾಶ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲರಾದ ಸುಷ್ಮಾ ಎಸ್.ಹಡಗಲಿಮಠ, ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.




















