
ಕಲಬುರಗಿ: ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವದ ಕುರಿತು ಅವಹೇಳನಕಾರಿಯಾದ ಕೃತಿ ಹೊರತಂದ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ, ಜಾಗಾತಿಕ ಲಿಂಗಾಯತ ಮಹಾ ಸಭಾ ಹಾಗೂ ಬಸವಪರ ಸಂಘಟನೆ ನೆತೃತ್ವದಲ್ಲಿ ನಗರದ ಜಗತ್ ವೃತ್ತ ಶ್ರೀ ಬಸವೇಶ್ವರ ಪ್ರತಿಮೆ ಬಳಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದ ಸಂಘಟಕರು, ರವಿ ಹಂಜ್ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ಜಿ.ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ, ನಿಲಕಂಠ ಮೂಲಗೆ, ಅಮರನಾಥ ಪಾಟೀಲ, ಶರಣಕುಮಾರ ಮೋದಿ, ರವಿಂದ್ರ ಶಾಹಬಾದಿ, ಆರ್.ಜಿ.ಶಟಗಾರ, ಎಂ.ಎಸ್.ಪಾಟೀಲ ನರಿಬೋಳ, ಸಿದ್ದನಗೌಡ ಅಫಜಲಪೂರಕರ್À, ಸೇರಿದಂತೆ ವೀರಶೈವ ಲಿಂಗಾಯತ ಬಂಧುಗಳು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




















