Home ಜಿಲ್ಲೆ ಕಲಬುರಗಿ 91,120 ರೂ.ಮೌಲ್ಯದ 2680 ಕೆಜಿ ಅಕ್ಕಿ ಜಪ್ತಿ

91,120 ರೂ.ಮೌಲ್ಯದ 2680 ಕೆಜಿ ಅಕ್ಕಿ ಜಪ್ತಿ

ಕಲಬುರಗಿ,ನ.21-ನಗರದ ಬಂಬೂ ಬಜಾರ್ ಬಸ್ ನಿಲ್ದಾಣ ಎದರುಗಡೆಯ ಅಂಗಡಿಯೊಂದರಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಎಸ್.ಪಾಟೀಲ, ಚೌಕ್ ಪೊಲೀಸ್ ಠಾಣೆ ಎಎಸ್‍ಐ ಥಾವರು, ಸಿಬ್ಬಂದಿಗಳಾದ ಸುರೇಶ, ರೇವಣಸಿದ್ದ ಅವರು ದಾಳಿ ನಡೆಸಿ 91,120 ರೂ.ಮೌಲ್ಯದ 2680 ಕೆಜಿ ಅಕ್ಕಿ ಜಪ್ತಿ ಮಾಡಿದ್ದಾರೆ.
ಅಕ್ಕಿ ಸಂಗ್ರಹಿಸಿದ ಶಹಾಬಜಾರದ ಮಹಾದೇವಪ್ಪ ದಾಸೆಟ್ಟಿ ಮತ್ತು ಅಂಗಡಿಯ ಮಾಲಿಕನ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.