ತಾಳಿಕೋಟೆ: ರೋಟರಿ ಸಂಸ್ಥೆಯೆನ್ನುವದು ಪ್ರಪಂಚದಾಧ್ಯAತ ಸಮಾಜಸೇವೆ ಮಾನವೀಯ ನೆರವು ಮತ್ತು ಜಾಗತೀಕ ಮಟ್ಟದಲ್ಲಿಯ ಶಾಂತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಒಂದು ಅಂತರಾಷ್ಟಿçÃಯ ಸೇವಾ ಸಂಸ್ಥೆಯಾಗಿದೆ ಎಂದು ಸ್ಥಳೀಯ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಘನಶ್ಯಾಮ ಚವ್ಹಾಣ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ವಿಠ್ಠಲಮಂದಿರದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಏರ್ಪಡಿಸಲಾದ ಪ್ರೌಢಶಾಲಾ ಮಕ್ಕಳಿಗಾಗಿ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಜಾತಿ ಧರ್ಮ ರಾಜಕೀಯಕ್ಕೆ ಅತೀತವಾಗಿ ಕಾರ್ಯನಿರ್ವಹಿಸುತ್ತಾ ಸಾಗಿದ್ದ ಈ ಸಂಸ್ಥೆ ಜಗತ್ತಿನಾಧ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿದೆ ಎಂದ ಅವರು ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ಉಚಿತ ಸೈಕಲ್ ಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿ ತಮ್ಮ ವಿದ್ಯಾರ್ಜನೆಗಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಸ್ಥಾನ ಅಲಂಕರಿಸಿದ ರೋಟರಿಯನ್ ಡಾ|| ವಿಜಯಕುಮಾರ ಕಾರ್ಚಿ ಅವರು ಮಾತನಾಡಿ ರೋಟರಿ ಸಂಸ್ಥೆಯೆAಬುದು ಅಂತರಾಷ್ಟಿçÃಯ ಲಾಭ ರಹಿತ ಸಾಮಾಜಿಕ ಸಂಸ್ಥೆಯಾಗಿದೆ ಯಾವಧೇ ಸಿದ್ದಾಂತಕ್ಕೆ ಒಳಗಾಗದೇ ಕೇವಲ ಮಾನವೀಯ ಸೇವೆಯನ್ನು ಒದಗಿಸುವ ಉದ್ದೇಶ ಈ ಸಂಸ್ಥೆಯದ್ದಾಗಿದೆ ಎಂದ ಅವರು ಇಂದು ಶಾಲಾಮಕ್ಕಳಿಗೆ ನೀಡುವ ಸೈಕಲ್ ಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಉಪನ್ಯಾಸಕರಾದ ಡಾ. ಎ.ಬಿ.ಇರಾಜ ಅವರು ಮಾತನಾಡಿ ಕಳೆದ ೨೪ ವರ್ಷಗಳಿಂದಲೂ ಅನೇಕ ಸಾರ್ವಜನಿಕ ಸೇವೆಗಳನ್ನು ಏರ್ಪಡಿಸುತ್ತಾ ಸಾಗಿದಂತಹ ತಾಳಿಕೋಟೆಯ ರೋಟರಿ ಸಂಸ್ಥೆಯು ತನ್ನ ಘನತೆ ಗೌರವ ಹೆಚ್ಚಿಸಿಕೊಂಡಿದೆ ಈ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಸಂಸ್ಥೆಯ ಕಾರ್ಯ ಚಟುವಟಿಕೆಗಳಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸುತ್ತಾ ಸಾಗಿರುವದು ಮೆಚ್ಚುವಂತಹದ್ದಾಗಿದೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಸೌಕರ್ಯ ಹೊಂದಿದ್ದರೂ ಸ್ಥಳೀಯ ಮಕ್ಕಳಿಗೆ ಶಾಲೆಗೆ ಹೋಗಲು ಅವರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ಸೈಕಲ್ ಗಳನ್ನು ವಿತರಿಸುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿರುವದು ಮೆಚ್ಚುವಂತಹ ಕಾರ್ಯ ಇದಾಗಿದೆ ಎಂದರು.
ಇನ್ನೋರ್ವ ಪ್ರಾಸ್ತಾವಿಕ ಮಾತನಾಡಿ ರೋಟರಿಯನ್ ಅಶೋಕ ಬಳಗಾನೂರ ಅವರು ಮಾತನಾಡಿ ಜಗತ್ತಿನ ೨೪೫ ದೇಶಗಳಲ್ಲಿ ರೋಟರಿ ಸಂಸ್ಥೆ ತನ್ನ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದೆ ಜಾಗತೀಕ ಮಟ್ಟದಲ್ಲಿ ಶಾಲಾಮಕ್ಕಳಿಗೆ ಕಲ್ಪಿಸುವಂತೆ ನಾವೂ ಕೂಡಾ ಸ್ಥಳೀಯ ಪ್ರೌಢಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲು ಮುಂದಾಗಿದ್ದೇವೆ ಸೈಕಲ್ ಪಡೆದ ವಿದ್ಯಾರ್ಥಿಗಳು ೮,೯,ಹಾಗೂ೧೦ ನೇ ತರಗತಿಯವರಿಗೆ ಉಪಯೋಗಿಸಿಕೊಂಡು ಹೆಚ್ಚಿನ ಅಂಕ ಪಡೆದರೆ ಸಂಸ್ಥೆಯ ವತಿಯಿಂದ ಸ್ಕಾಲರ್ಶಿಫ್ ನೀಡುತ್ತೇವೆಂದರು.
ಇದೇ ಸಮಯದಲ್ಲಿ ಉಪಸ್ತಿತ ಎಲ್ಲ ರೋಟರಿ ಸಂಸ್ಥೆಯ ಸದಸ್ಯರ ವತಿಯಿಂದ ೨೦ ವಿದ್ಯಾರ್ಥಿಗಳಿಗೆ ೨೦ ಸೈಕಲ್ ಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ರೋಟರಿ ಸಂಸ್ಥೆಯ ರೋಟರಿಯನ್ರಾದ ಡಾ|| ಎ.ಎ. ನಾಲಬಂದ, ಡಾ|| ಆನಂದ ಭಟ್, ಪ್ರಭುಗೌಡ ಮದರಕಲ್ಲ, ಸಂಜೀವಕುಮಾರ್ ಹಜೇರಿ, ಶ್ಯಾಮ್ ಹಂಚಾಟೆ, ಎ.ಎಸ್. ಮಾಳಿ, ಬಸವರಾಜ ಕುಂಬಾರ, ಶ್ರೀನಿವಾಸ ಸೋನಾರ, ಎಂ.ಎಸ್. ನಾಗರಾಳ, ರಾಜಶೇಖರ ಸಜ್ಜನ, ಎಂ.ಎಸ್. ಸರಶೆಟ್ಟಿ, ಸುಭಾಸ ಬಬಲೆಶ್ವರ, ಎಂ.ಆರ್. ಕತ್ತಿ, ಎಂ.ಬಿ. ಮಡಿವಾಳರ ಮೊದಲಾದವರು ಉಪಸ್ತಿತರಿದ್ದರು.
ಶಿಕ್ಷಕ ಎಸ್.ಎಂ. ಪಾಲ್ಕಿ ಕಾರ್ಯಕ್ರಮ ನಿರ್ವಹಿಸಿದರು.





















