Home ಜಿಲ್ಲೆ ನ.೨೪ರಂದು ಪ್ರತಿಭಟನೆ

ನ.೨೪ರಂದು ಪ್ರತಿಭಟನೆ


ನವಲಗುಂದ,ನ.೨೨: ‘ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ಹಾಗೂ ಬಡವರ ವಿರೋಧಿ ನೀತಿಗಳನ್ನು ಖಂಡಿಸಿ ನ.೨೪ ಮಂಗಳವಾರದAದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ನವಲಗುಂದ ಬಿಜೆಪಿ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ತಿಳಿಸಿದ್ದಾರೆ.


ರೈತರ ಬರ ಪರಿಹಾರ, ಬೆಳೆ ವಿಮೆ, ಮಲಪ್ರಭಾ ಕಾಲುವೆಗೆ ನೀರು ಮುಂದುವರಿಸುವದು, ಸಾಲ ಮನ್ನಾ ಹಾಗೂ ಸಹಾಯಧನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿ ಸಮಸ್ಯೆ, ಹಾಗೂ ತೀವ್ರ ಬರಗಾಲ ಘೋಷಣೆಯಿಂದ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬAಧಿಸಿದAತೆ ‘ಮಂಗಳವಾರ ಬೆಳಿಗ್ಗೆ ೧೧ಕ್ಕೆ ಗಣಪತಿ ದೇವಸ್ಥಾನದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಮಹಾತ್ಮ ಗಾಂಧಿ ಮಾರುಕಟ್ಟೆ ಲಿಂಗರಾಜ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತಲುಪಲಿದೆ. ರೈತರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅಧ್ಯಕ್ಷ ಗಂಗಪ್ಪ ಮನಮಿ ಸಾರ್ವಜನಿಕರಲ್ಲಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.