Home ಜಿಲ್ಲೆ ನೆಲ ಜಲ ಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ

ನೆಲ ಜಲ ಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ


ನವಲಗುಂದ,ನ.೨೪
: ಆಯಟ್ಟಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು.
ಸಾನಿಧ್ಯ ಪರಮಪೂಜ್ಯ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಿರಕೋಳ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎನ್‌ಎಚ್ ಕೋನರಡ್ಡಿ ನೆರವೇರಿಸಿದರು. ಜಿಲ್ಲಾ ಕರವೇ ಅಧ್ಯಕ್ಷರಾದ ರುದ್ರೇಶ್ ಹಳವದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಬಿ.ಡಿ ಹಿರೇಮಠ ಭವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ (ಗ್ರಾ) ಕಾರ್ಯದರ್ಶಿ ದೇವರಾಜ್ ಬ. ದಾಡಿಬಾವಿ ಭಾಗವಹಿಸಿ ನಾಡು ನುಡಿ ನೆಲಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನೂತನವಾಗಿ ನಿಗಮ ಮಂಡಳಿ ನೇಮಕವಾದ ಪರಮೇಶ್ವರ ಕಾಳೆ ರವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಡಾ: ಉದಯ್ ರಾಯ್ಕರ, ರಾಜೇಂದ್ರ ಹೊಸಮಠ, ಮಾರ್ಥಂಡಪ್ಪ ಕತ್ತಿ, ಬಸವರಾಜ್ ವಡ್ಡರ್, ಪ್ರಭು ಕುಂಬಾರ, ಕಲ್ಮೇಶ ಸಾಲಿ, ಗೌಡಪ್ಪಗೌಡ ಇಮ್ಮನಗೌಡ ಶಹನವಾಜ ಅಮೃತ ಹಿರೇಂಚಿನಾಳ, ಧಾರವಾಡ ಸಂಗಮೇಶ್ ಮುತ್ತಗಿ ಸೇರಿದಂತೆ ಕರವೇ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.