Home ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗದ ರಾಜಕಾರಣಿ ಪ್ರಿಯಾಂಕ್ ಖರ್ಗೆ ; ಅರುಣಕುಮಾರ ಪಾಟೀಲ

ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗದ ರಾಜಕಾರಣಿ ಪ್ರಿಯಾಂಕ್ ಖರ್ಗೆ ; ಅರುಣಕುಮಾರ ಪಾಟೀಲ

ಅಫಜಲಪುರ:ರಾಜ್ಯದ ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆಯವರು ತಮ್ಮ ದಕ್ಷ ಆಡಳಿತ, ತಂತ್ರಜ್ಞಾನ ಆಧಾರಿತ ಸುಧಾರಣೆಗಳು ಹಾಗೂ ಪ್ರಗತಿಪರ ಚಿಂತನೆಗಳ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ 48ನೇ ಜನ್ಮದಿನಾಚರಣೆ ಅಂಗವಾಗಿ ಬಡರೋಗಿಗಳಿಗೆ ಹಣ್ಣು, ಹಂಪಲು, ಹೊದಿಕೆ ವಿತರಣೆ ಮಾಡಿ ಮಾತನಾಡಿದ ಅವರು, ಚಿತ್ತಾಪುರ ಕ್ಷೇತ್ರಕ್ಕಿಂತ ಹೆಚ್ಚಿನ ಅನುದಾನವನ್ನು ಅಫಜಲಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಪ್ರಿಯಾಂಕ್ ಖರ್ಗೆಯವರು ನಿರಂತರವಾಗಿ ಕೊಟ್ಟಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳದೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಇಡೀ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿದ್ದಾರೆ ಎಂದು ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದಾರ್ಥ್ ಬಸರಗಿಡ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್,ಎಪಿಎಂಸಿ ನಿರ್ದೇಶಕ ಶರಣು ಕುಂಬಾರ, ಅಂಬರೀಷ್ ಬುರಲಿ,
ರಮೇಶ್ ಪೂಜಾರಿ,ಶಿವಾನಂದ ಗಾಡಿ ಸಾಹುಕಾರ,ಕಂಟೇಪ್ಪ ಬಳೂರ್ಗಿ,ಚಂದು ದೇಸಾಯಿ,ರಾಜಶೇಖರ ಪಾಟೀಲ್, ಮಹಾಲಿಂಗ ಅಂಗಡಿ, ಮಲ್ಲಯ್ಯ ಹೊಸಮಠ, ಅಣವೀರಯ್ಯ ಮಠಪತಿ, ಸಿದ್ದು ಚವಡಾಪುರ,ವಿಶ್ವನಾಥ್ ಮಲಘಾಣ, ಬಿಸ್ಮಿಲ್ಲಾ ಶೇಖ್,ದುಂಡಪ್ಪ ಜಮಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯಾವುದೇ ಇಲಾಖೆ ಖಾತೆ ನೀಡಿದರು, ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ರಾಜಕಾರಣಿ ಪ್ರಿಯಾಂಕ್ ಖರ್ಗೆ. ಹಿಂದೆ ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಸ್ತುತ ಐಟಿಬಿಟಿ ಹಾಗೂ ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆಯವರ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನತೆಯ ಸೇವೆ ಸಲ್ಲಿಸಲಿ ಎಂದು ಲಕ್ಷಾಂತರ ಅಭಿಮಾನಿಗಳ ಕನಸು. ಗೃಹ ಸಚಿವರಾದ ಮೇಲೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

-ಮತೀನ್ ಪಟೇಲ್
ಜಿ.ಪಂ.ಮಾಜಿ ಸದಸ್ಯರು, ಅಫಜಲಪುರ