
ಕಲಬುರಗಿ,ನ 24: ಬೆಂಗಳೂರಿನಲ್ಲಿ ನ. 22 ರಂದು ನಡೆದ ಕೆಂಪೇಗೌಡ ಕಪ್ ಟಿಕೆಎಫ್ಐ 5ನೇ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕಲಬುರಗಿಯ ಕಲರಿ-ಎನ್-ರ್ಯೂ ಅಕಾಡೆಮಿ ಆಫ್ ಇಂಡಿಯನ್ ಕರಾಟೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕಲಬುರಗಿ ಜಿಲ್ಲಾ ಮುಖ್ಯ ಕರಾಟೆ ತರಬೇತುದಾರ ಕಿಯೋಶಿ ರಾಜವರ್ಧನ್ ಜಿ. ಚೌಹಾಣ್ ಅವರ ನೇತೃತ್ವದಲ್ಲಿ ಅಕಾಡೆಮಿಯ ಒಟ್ಟು 18 ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ ಭಾಗವಹಿಸಿ, ಎರಡೂ ವಿಭಾಗಗಳಲ್ಲಿ ಒಟ್ಟು 27 ಪದಕ ಸ್ಥಾನಗಳನ್ನು ಪಡೆದು ಕಲಬುರಗಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಕಟಾ ವಿಭಾಗದ ವಿಜೇತರು-ಪ್ರಥಮ ಸ್ಥಾನ:ರಾಜೇಶ್ವರಿ,ಐಶ್ವರ್ಯ,ಮಹಾರಾಣಾ,ಅವೀರಾ,ವೀರಂ ಸ್ನೇಹಾ,ಸನ್ನವಿ,
ಯಶರಾಜ್,ಪ್ರಭುಲಿಂಗಯ್ಯ,ಕಾರ್ತಿಕ್,ದ್ವಿತೀಯ ಸ್ಥಾನ-ಅರ್ಜುನ್,ಶೌರ್ಯ,ವೈಷ್ಣವಿ,ತೃತೀಯ ಸ್ಥಾನ-ಸ್ವರೂಪ್,ಸಾತ್ವಿಕ್,ರೋಹಿತ್,ಸಂಜನಾ,ಗುರುರಾಜ್, ಹರೀಶ್
ಕುಮಿತೆ ವಿಭಾಗದ ವಿಜೇತರು-ಪ್ರಥಮ ಸ್ಥಾನ:ರೋಹಿತ್,ದ್ವಿತೀಯ ಸ್ಥಾನ:ಅವೀರಾ ಐಶ್ವರ್ಯ,ತೃತೀಯ ಸ್ಥಾನ:
ವೀರಂ ಸ್ನೇಹಾ,ಶೌರ್ಯ,ಸ್ವರೂಪ್,ಅರ್ಜುನ್,ರಾಜೇಶ್ವರಿ,ಕಾರ್ತಿಕ್,





















