Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್:ಶ್ರೀಕಾಂತ್,ಪ್ರತಾಪಸಿಂಗ್‍ಗೆ ಪ್ರಥಮ ಸ್ಥಾನ

ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್:ಶ್ರೀಕಾಂತ್,ಪ್ರತಾಪಸಿಂಗ್‍ಗೆ ಪ್ರಥಮ ಸ್ಥಾನ

ಕಲಬುರಗಿ,ನ.24: ಬೆಂಗಳೂರಿನಲ್ಲಿ ನ. 22 ರಂದು ನಡೆದ ಕೆಂಪೇಗೌಡ ಕಪ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕಲಬುರಗಿಯ ಕಲರಿ-ಎನ್-ರ್ಯೂ ಅಕಾಡೆಮಿ ಆಫ್ ಇಂಡಿಯನ್ ಕರಾಟೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ತರಬೇತುದಾರರಾದ ಶ್ರೀಕಾಂತ್ ಮತ್ತು ಪ್ರತಾಪ್ ಸಿಂಗ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.ಈ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ 40 ವರ್ಷ ಮೇಲ್ಪಟ್ಟ ಹಿರಿಯ ಮಾಸ್ಟರ್‍ಗಳ ಕಟಾ ವಿಭಾಗದಲ್ಲಿ ಭಾಗವಹಿಸಿದ ಶ್ರೀಕಾಂತ್ ಹಾಗೂ ಪ್ರತಾಪ್ ಸಿಂಗ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕÀಲಬುರಗಿ ಜಿಲ್ಲಾ ಮುಖ್ಯ ಕರಾಟೆ ತರಬೇತುದಾರರಾದ ಕಿಯೋಶಿ ರಾಜವರ್ಧನ್ ಜಿ. ಚೌಹಾಣ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಇಬ್ಬರೂ ತಮ್ಮ ಅನುಭವ, ಕೌಶಲ್ಯ, ಏಕಾಗ್ರತೆ ಮತ್ತು ನಿರಂತರ ಅಭ್ಯಾಸದ ಮೂಲಕ ಈ ಅದ್ಭುತ ಸಾಧನೆ ಮಾಡಿದ್ದಾರೆ.ವಯಸ್ಸು ಸಾಧನೆಗೆ ಎಂದಿಗೂ ಅಡ್ಡಿಯಲ್ಲ ಎಂಬುದಕ್ಕೆ ಇವರಿಬ್ಬರ ಸಾಧನೆಯೇ ಉತ್ತಮ ಉದಾಹರಣೆ. ಕ್ರೀಡೆಯ ಮೇಲಿನ ಆಸಕ್ತಿ, ಶಿಸ್ತು, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮವಿದ್ದರೆ ಯಾವುದೇ ವಯಸ್ಸಿನಲ್ಲಿಯೂ ಹೊಸ ಸಾಧನೆಗಳನ್ನು ಮಾಡಬಹುದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.ಶ್ರೀಕಾಂತ್ ಹಾಗೂ ಪ್ರತಾಪ್ ಸಿಂಗ್ ಅವರ ಈ ಅಭೂತಪೂರ್ವ ಸಾಧನೆಗೆ ಅಕಾಡೆಮಿಯ ಮುಖ್ಯ ತರಬೇತುದಾರರು, ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಕ್ರೀಡಾಭಿಮಾನಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.