Home ಜಿಲ್ಲೆ ನಾರಂಜಾ ಕಾರಖಾನೆ, 4.5 ಲಕ್ಷ ಟನ್ ಕಬ್ಬು ಕ್ರಷಿಂಗ್ ಗುರಿ: ಸೂರ್ಯಕಾಂತ ನಾಗಮಾರಪಳ್ಳಿ

ನಾರಂಜಾ ಕಾರಖಾನೆ, 4.5 ಲಕ್ಷ ಟನ್ ಕಬ್ಬು ಕ್ರಷಿಂಗ್ ಗುರಿ: ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್:ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 4.5 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಕಬ್ಬು ನುರಿಸುವ ಹಂಗಾಮು ಆರಂಭದ ನಿಮಿತ್ತ ಕಾರಖಾನೆಯಲ್ಲಿ ಪೂಜ್ಯರ ಸಾನಿಧ್ಯದಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರಖಾನೆ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಉಪಾಧ್ಯಕ್ಷ ಬಾಲಾಜಿ ಚಹ್ವಾಣ್ ಅವರು ಜಂಟಿಯಾಗಿ ಪೂಜೆ ನೆರವೇರಿಸಿದರು. ಜಿಲ್ಲೆಯ ರೈತರು ಕಬ್ಬ ಪೂರೈಸುವ ಮೂಲ ಸಹಕರಿಸಬೇಕು ಎಂದು ಕೋರಿದರು.
ತಡೋಳಾ, ಮೆಹಕರ ಮಠದ ಪೂಜ್ಯರಾದ ರಾಜೇಶ್ವರ ಶಿವಾಚಾರ್ಯರು ಮತ್ತು ಹುಲಸೂರಿನ ಪೂಜ್ಯ ಶಿವಾನಂದ ಸ್ವಾಮಿಗಳು ಆಶಿರ್ವಚನ ನೀಡಿದರು. ಸಹಕಾರ ರತ್ನ ದಿವಂಗತ ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಸಾರ್ವಜನಿಕ ಜೀವನವು ಕೇವಲ ರಾಜಕೀಯ ಅಧಿಕಾರಕ್ಕೆ ಸೀಮಿತವಾಗಿರದೆ, ರೈತರ ಆರ್ಥಿಕ ಸಬಲೀಕರಣ, ಬಡವರ ಕಲ್ಯಾಣ, ಮಹಿಳಾ ಸ್ವಾವಲಂಬನೆ, ಯುವಕರ ಉದ್ಯೋಗಾವಕಾಶ ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡಿತ್ತು ಎಂದು ಶ್ಲಾಘಿಸಿದರು.
ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಬೀದರ್ ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆಯನ್ನು ಪೂಜ್ಯರು ವಿಶೇಷವಾಗಿ ಸ್ಮರಿಸಿದರು. ಜಿಲ್ಲೆಯ ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ನಾರಂಜಾ ಸಹಕಾರ ಸಕ್ಕರೆ ಕಾರಖಾನೆಯನ್ನು ದಾಖಲೆಯ ಅವಧಿಯಲ್ಲಿ ನಿರ್ಮಿಸಿದ್ದರು. ಡಿಸಿಸಿ ಬ್ಯಾಂಕನ್ನು ದೇಶದ ಗಮನ ಸೆಳೆಯುವ ರೀತಿಯಲ್ಲಿ ಬೆಳೆಸಿದ್ದರು ಎಂದು ಪೂಜ್ಯರು ಹೇಳಿದರು.
ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವುದು, ಬಡ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದು ಮತ್ತು ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಸೇವಾ ಕಾರ್ಯದ ಪ್ರಮುಖ ಉದ್ದೇಶಗಳಾಗಿದ್ದವು. ನಾಗಮಾರಪಳ್ಳಿ ಅವರು ಆರಂಭಿಸಿದ್ದ ಮತ್ತು ಪೆÇ್ರೀತ್ಸಾಹಿಸಿದ ಸಹಕಾರಿ ಹಾಗೂ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳು ಇಂದಿಗೂ ಬೀದರ್ ಜಿಲ್ಲೆಯ ಜನಜೀವನದಲ್ಲಿ ಸ್ಮರಣೀಯವಾಗಿವೆ. ಅವರ ಸೇವೆ, ಸಾಧನೆ ಮತ್ತು ದೂರದೃಷ್ಟಿಯ ಚಿಂತನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಪೂಜ್ಯರು ಸ್ಮರಿಸಿದರು.
ಈ ಸಾಲಿನಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಯವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಬ್ಬಿನ ದರ ಕುರಿತು ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಚಿಂತನೆ ನಡೆಸುತ್ತಿವೆ. ರೈತರು ಯಾವುದೇ ರೀತಿ ಆತಂಕ ಮತ್ತು ಗೊಂದಲಕ್ಕೊಳಗಾಗದೆ ಕಾರ್ಖಾನೆಗೆ ಕಬ್ಬು ಸಾಗಿಸಬೇಕು ಎಂದರು.
ಪೂಜ್ಯರಾದ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ, ಪೂಜ್ಯ ರುದ್ರಮುನಿ ಪಟ್ಟದೇವರು ಹಿರೇಮಠ ಚಾಂಬೋಳ, ಬರದಿಪುರದ ಪೂಜ್ಯ ಅವಧೂತಗಿರಿ ಮಹಾರಾಜರು, ಹುಡಗಿ ಹಿರೇಮಠದ ಪೂಜ್ಯ ವಿರುಪಾಕ್ಷ ಶಿವಾಚಾರ್ಯರು, ಹೆಡಗಾಪುರ ಹಿರೇಮಠದ ಪೂಜ್ಯ ಶಿವಲಿಂಗ ಶಿವಾಚಾರ್ಯರು, ಚಿಟಗುಪ್ಪದ ಗುರುಲಿಂಗ ಶಿವಾಚಾರ್ಯರು, ಹಿರನಾಗಾಂವ್‍ದ ಪೂಜ್ಯ ಜೈ ಶಾಂತಲಿಂಗ ಮಹಾಸ್ವಾಮಿಗಳು, ಡೋಣಗಾಂವದ ಪೂಜ್ಯ ಡಾ. ಶಂಭುಲಿಂಗ ಶಿವಾಚಾರ್ಯರು, ಕಿಟ್ಟಾದ ಪೂಜ್ಯ ನಿಜಲಿಂಗ ಶಿವಾಚಾರ್ಯರು, ಪೂಜ್ಯ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಲಾಡಗೇರಿಯ ಗಂಗಾಧರ ಶಿವಾಚಾರ್ಯರು, ಪೂಜ್ಯ ಚಿದಾನಂದ ಶಿವಾಚಾರ್ಯರು ಬೀದರ ಬಿಲಗುಂದಿ, ಹಲಬರ್ಗಾದ ಪೂಜ್ಯ ಹಾವಗಿಲಿಂಗ ಶಿವಾಚಾರ್ಯರು, ಹಳ್ಳಿಖೇಡದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಯದಲಾಪುರದ ಪೂಜ್ಯ ಸಿದ್ದಲಿಂಗ ಶಿವಾಚಾರ್ಯರು, ಬೇಮಳಖೇಡದ ಚಂದ್ರಶೇಖರ ಶಿವಾಚಾರ್ಯರು. ಡೋಂಗರಗಾಂವ್‍ದ ಉದಯರಾಜ್ ಯೋಗೇಂದ್ರ ಶಿವಾಚಾರ್ಯರು, ಕಲ್ಲೂರಿನ ಮೃತ್ಯುಂಜಯ ಶಿವಾಚಾರ್ಯರು, ಸದಲಾಪುರದ ಸಿದ್ದಲಿಂಗ ಶಿವಾಚಾರ್ಯರು, ಮಾಳಚಾಪುರದ ಸದ್ರುಪಾನಂದ ಮಹಾಸ್ವಾಮಿಗಳು, ಸಿಂಧನಕೇರಾದ ಹೊನ್ನಲಿಂಗ ಮಹಾಸ್ವಾಮಿಗಳು, ಖಟಕಚಿಂಚೋಳಿಯ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, ಸಾಯಗಾಂವ್ ಶಿವಾನಂದ ಮಹಾಸ್ವಾಮಿಗಳು, ಹುಡಗಿ ಮಠದ ಚನ್ನಮಲ್ಲ ಮಹಾಸ್ವಾಮಿಗಳು, ಸ್ವಂತ ಮಠದ ಪೂಜ್ಯ ಶಿವಕುಮಾರ ಶಿವಾಚಾರ್ಯರು, ಹೆಡಗಾಪುರದ ಪೂಜ್ಯ ದಾರುಕಲಿಂಗ ಶಿವಾಚಾರ್ಯರು, ಮರಕುಂದಾದ ಶರಣಬಸವ ಸ್ವಾಮಿಗಳು ಉಪಸ್ಥಿತರಿದ್ದರು.
ಸಹಕಾರ ಕ್ಷೇತ್ರದ ಹಿರಿಯ ನಾಯಕ, ಕಾರಖಾನೆಯ ನಿರ್ದೇಶಕರಾದ ಉಮಾಕಾಂತ ನಾಗಮರಪಳ್ಳಿ, ರಾಜಕುಮಾರ ಕರಂಜಿ, ವಿಜಯಕುಮಾರ ಪಿ. ಪಾಟೀಲ, ಶ್ರೀಮತಿ ಮಲ್ಲಮ್ಮಾ ಪಾಟೀಲ, ಶ್ರೀಮತಿ ಶೋಭಾವತಿ ಪಾಟೀಲ, ಸಂಗಮೇಶ ಪಾಟೀಲ, ಕುಶಲರಾವ ಯಾಬಾ, ಸಂಜುಕುಮಾರ ಸಿದ್ದಾಪೂರೆ, ಅಂಬ್ರೇಷ ನಾಗಮಾರಪಳ್ಳಿ, ವೀರಶೆಟ್ಟಿ ಪಟ್ನೆ, ಶಶಿಕುಮಾರ ಪಾಟೀಲ ಸಂಗಮ, ಬಾಲಾಜಿ ರೆಡ್ಡಿ ಯಾಚೆ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಪಾಟೀಲ, ಪ್ರಮುಖರಾದ ವೈಜನಾಥ ಬುಯ್ಯ, ಶಂಕರೆಪ್ಪ ಪಾರಾ, ಸಂತೋಷ ವಲ್ಯಾಪೆ, ವೆಂಕಟರಾವ ವಲ್ಯಾಪೆ, ಮಾಧವರಾವ ಪಾಟೀಲ್, ಮಾಣಿಕ ಯಾಬಾ, ಮಾಣಿಕ್ ಯಾಬಾ ಮತ್ತಿತರ ಗಣ್ಯರು ಉಪಸ್ಥಿರಿದ್ದರು.