Home ಜಿಲ್ಲೆ ಕಲಬುರಗಿ ಜೇವರಗಿ ಮಹಾಲಕ್ಷ್ಮೀ ಜಾತ್ರೆಯಲ್ಲಿ ಸಚಿವ ಡಾ. ಅಜಯ್‍ಸಿಂಗ್ ಭಾಗಿ

ಜೇವರಗಿ ಮಹಾಲಕ್ಷ್ಮೀ ಜಾತ್ರೆಯಲ್ಲಿ ಸಚಿವ ಡಾ. ಅಜಯ್‍ಸಿಂಗ್ ಭಾಗಿ

ಕಲಬುರಗಿ,ಅ.30: ಜಿಲ್ಲೆಯ ಜೇವರಗಿಯ ಆರಾಧ್ಯ ದೇವತೆಯಾದ ಕಲ್ಕತ್ತಾದೇವಿ ( ಮಹಾಲಕ್ಷ್ಮೀ ದೇವಿ) ಜಾತ್ರಾ ಮಹೋತ್ಸವದ ಮೂರನೇ ದಿನದ ಅಂಗವಾಗಿ, ಬಡಿಗೇರ ಮನೆಯಲ್ಲಿ ಸಣ್ಣ ನೀರಾವರಿ, ವಿಜ್ಞಾನ, ತಂತ್ರಜ್ಞಾನ ಸಚಿವರಾದ ಡಾ. ಅಜಯ್ ಸಿಂಗ್, ಶ್ವೇತಾ ಸಿಂಗ್ ದಂಪತಿ ಶ್ರೀದೇವಿಯ ದರ್ಶನ ಪಡೆದು, ಉಡಿ ತುಂಬಿ ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿದರು.
ನಾಡಿನ ಸಮಸ್ತ ಜನತೆಯ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿ, ಎಲ್ಲರ ಬಾಳಿನಲ್ಲಿ ಸಂತೋಷ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲಿ ಹಾಗೂ ರೈತರು, ಕಾರ್ಮಿಕರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗದ ಜನರ ಬದುಕು ಹಸನಾಗಲಿ ಎಂದು ಶ್ರೀ ದೇವಿಯಲ್ಲಿ ಭಕ್ತಿಪೂರ್ವಕವಾಗಿ ಡಾ. ಅಜಯ್ ಸಿಂಗ್ ದಂಪತಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀ ದೇವಿಯ ದರ್ಶನ ಪಡೆದರು.