
ಸಂಜೆ ವಾಣಿ ವಾರ್ತೆ
ಯಾದಗಿರಿ: ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಯುವ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ್ ಅವರು ತಮ್ಮ ತಂಡದೊAದಿಗೆ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಮಠಕ್ಕೆ ಭೇಟಿ ನೀಡಿ, ನವರಾತ್ರಿ ಅಂಗವಾಗಿ ನಡೆದ ಶ್ರೀದೇವಿಯ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.
ನವರಾತ್ರಿ ಸಂದರ್ಭದಲ್ಲಿ ಜಗನ್ಮಾತೆಗೆ ವಿಶೇಷ ಪೂಜೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ಲಕ್ಷ್ಮೀಪುತ್ರ ಮಾಲಿಪಾಟೀಲ್ ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಉತ್ತಮ ಜನಸೇವೆಯ ಮೂಲಕ ಭವಿಷ್ಯದ ನಾಯಕತ್ವಕ್ಕೆ ಸಿದ್ಧರಾಗಬೇಕು ಎಂದು ಶ್ರೀಗಳು ಹಾರೈಸಿದರು.
ಇದೇ ಸಂದರ್ಭದಲ್ಲಿ ಯಾದಗಿರಿ ನಗರದ ದಾಸಬಾಳ ಮಠಕ್ಕೂ ಬಿಜೆಪಿ ಯುವ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ್ ಹಾಗೂ ಅವರ ತಂಡ ಭೇಟಿ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಶಿವಶೇಖರ ಸ್ವಾಮೀಜಿ ಸೇರಿದಂತೆ ಯುವ ಮೋರ್ಚಾದ ಮುಖಂಡರಾದ ವೆಂಕಟರೆಡ್ಡಿ ಮಾಲಿಪಾಟೀಲ್ (ಅಬ್ಬೆತುಮಕೂರು), ರವಿ ಬಾಪೂರೆ, ಮಲ್ಲುಸ್ವಾಮಿ ಗುಡಿಮಠ, ಸುಗುರೇಶ ಚಾಮಾ, ಅಜಯ್ ಮಡ್ಡಿ, ಮಂಜುನಾಥ ಕೇಸರಟಗಿ, ಕೃಷ್ಣ ಪಂಚಾಳ, ಶಿವರಾಜ ಗುತೇದಾರ, ವೀರೇಶ ಕರಣಗಿ, ಶಶಿಕಿರಣ ಹಿರೇಮಠ, ಇಂದ್ರಜಿತ್ ಗುಂಡಳ್ಳಿ, ಸಾಯಿಕುಮಾರ ಮುಂಡರಗಿ ತಾಂಡಾ, ಸಿದ್ದು ಪೂಜಾರಿ, ವಿನಯ, ವೀರೇಶ ಪಾಟೀಲ್, ವಿಶಾಲ್, ಪವನ್ ಮಡಿವಾಳ, ಸುಮಿತ್ ಯರಗೋಳ, ಮಲ್ಲು ಬಂಡಳ್ಳಿ, ಕಾಶಿನಾಥ ವಾರಿಕ, ಮಾರುತಿ ಮುದ್ನಾಳ, ವೀರೇಶ ರಾಮಸಮುದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


















