Home ಮುಖಪುಟ ಸುದ್ದಿ ಸ್ಟಿಂಗ್ ಆಪರೇಷನ್, ಸಿಎಂ ತನಿಖೆ ಮಾಡಿಸಲಿ

ಸ್ಟಿಂಗ್ ಆಪರೇಷನ್, ಸಿಎಂ ತನಿಖೆ ಮಾಡಿಸಲಿ

ಬೆಂಗಳೂರು, ಅ.೧೩: ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿದ್ದು ಸಿಎಂ ಆಗಿದ್ದ ಸಿದ್ದರಾಮಯ್ಯ ವಿರುದ್ಧ ನಡೆಸಿದ ಸ್ಟಿಂಗ್ ಆಪರೇಷನ್ಗೆ ಅವರು ಸ್ಟೇ ಪಡೆದಿರುವ ವಿಚಾರವನ್ನು ಪ್ರಸ್ತಾಪಿಸಿ ಇದನ್ನು ಬ್ಲ್ಯಾಕ್ಮೇಲ್ ಎಂದೇ ಭಾವಿಸಬಹುದು ಎಂದು ಹೇಳಿದ್ದಾರೆ.


ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಎಲ್ಲಾ ಅಧಿಕಾರ ಇದೆ. ಅವರೇ ತನಿಖೆ ಮಾಡಿಸಬೇಕು. ಜನರಲ್ಲಿ ಮೂಡಿರುವ ಗೊಂದಲ ದೂರ ಮಾಡಬೇಕು. ಸಿಎಂ ಮೇಲೆ ಜವಾಬ್ದಾರಿ ಇದೆ. ತನಿಖೆ ಮಾಡಿಸಿ ತೆರೆ ಎಳೆಯಬೇಕು. ಇದು ಯಾರಿಗೂ ಗೌರವ ತರಲ್ಲ” ಎಂದು ರಾಜಣ್ಣ ತಿಳಿಸಿದ್ದಾರೆ.


ತಮ್ಮ ಮೇಲೂ ಪ್ರಯತ್ನ ಆಗಿತ್ತು


“ನನ್ನ ಮೇಲೂ ಹನಿ ಟ್ರ್ಯಪ್ ಪ್ರಯತ್ನ ಮಾಡಿದ್ರು. ಸರ್ಕಾರಿ ನಿವಾಸ ಆಗಿದ್ದರಿಂದ ಸೆಕ್ಯುರಿಟಿಗೆ ಸಿಸಿಟಿವಿ ಇರುತ್ತೆ ಅಂತ ಭಾವಿಸಿದ್ದೆ. ಆಮೇಲೆ ಗೊತ್ತಾಯ್ತು ಅಲ್ಲಿ ಇಲ್ಲ ಅಂತ” ಎಂದು ಅವರು ಬಹಿರಂಗಪಡಿಸಿದ್ದಾರೆ.

“ಇದು ಬಹಳ ಹಳೆಯ ಸ್ಟಿಂಗ್ ಆಪರೇಷನ್”


ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ಆಗಿದ್ದಕ್ಕೆ ಸ್ಟೇ ಬಂದಿರುವುದು ನಾಯಕತ್ವ ವಿಚಾರವಾಗಿ ಬಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಅವರು, “ಇದು ಬಹಳ ಹಳೆಯ ಸ್ಟಿಂಗ್ ಆಪರೇಷನ್. ರಾಜ್ಯದಲ್ಲಿ ಇದಕ್ಕೆ ಫ್ಯಾಕ್ಟರಿ ಇದೆ. ಒಂದೇ ಫ್ಯಾಕ್ಟರಿ ಇದೆ, ಪಾಟ್ನರ್ ಬೇರೆ ಇದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.


ರಮೇಶ್ ಜಾರಕಿಹೊಳಿ ಪ್ರಕರಣ ಉಲ್ಲೇಖ


“ರಮೇಶ್ ಜಾರಕಿಹೊಳಿ ಅವರದ್ದನ್ನು ಯಾರು ಮಾಡಿದ್ದು? ಅದನ್ನು ನೀವೇ ಹೇಳಿ. ಅವರೇ ಸಿದ್ದರಾಮಯ್ಯ ಅವರದ್ದು ಮಾಡಿದ್ದು. ಕರ್ನಾಟಕದ ಮಾನ-ಮರ್ಯಾದೆ ಹರಾಜಾಗುತ್ತಿದೆ. ನಮ್ಮ ಗೌರವ ನಾವೇ ಕಳೆದುಕೊಳ್ಳುತ್ತಿದ್ದೇವೆ” ಎಂದು ರಾಜಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.


ಕುಮಾರಸ್ವಾಮಿ ಕುರಿತು ವ್ಯಂಗ್ಯ


ಕುಮಾರಸ್ವಾಮಿ ಅವರ ಸಾಫ್ಟ್ ಕಾರ್ನರ್ ವಿಚಾರ ಪ್ರಸ್ತಾಪಿಸಿದ ರಾಜಣ್ಣ, “ಶತ್ರುವಿನ ಶತ್ರು ಮಿತ್ರ ಎಂಬ ಗಾದೆ ಇದೆ. ಸ್ಟೇ ತೆಗೆದುಕೊಂಡಿದ್ದಾರೆ ಅಂದ್ರೆ ಫ್ಯಾಕ್ಟ್ ಆಗಿದೆ ಅಂತ. ಸಿಎಂ ತನಿಖೆ ಮಾಡಿಸಿ ಸ್ಟಿಂಗ್ ಸ್ಟಾಪ್ ಮಾಡಿಸಬೇಕು. ಅಸಹಾಯಕನ ತರಹ ಅವರೇ ಮಾತನಾಡಿಸಿದ್ರೆ ಹೇಗೆ? ಯಾವೆಲ್ಲ ಇದೆ ಅಂತ ಆಚೆ ಹೇಳಲಿ. ಸ್ಟಿಂಗ್ ಮಾಡೋದು ಇಲ್ಲಿಗೆ ನಿಲ್ಲುತ್ತದೆ” ಎಂದು ಹೇಳಿದ್ದಾರೆ.ಹೈಕಮಾಂಡ್ಗೆ ಮನವಿ
“ಹೈಕಮಾಂಡ್ ಈ ಬಗ್ಗೆ ಹೇಳಬೇಕು. ಸಿಎಂ ಅವರು ಕ್ಯಾಬಿನೆಟ್ನಲ್ಲಿ, ಹೊರಗೆ ಹೇಳಿದ್ದಾರೆ. ಹೈಕಮಾಂಡ್ ಗಮನಕ್ಕೆ ಈ ವಿಚಾರ ಹೋಗಿರುತ್ತೆ. ಹೈಕಮಾಂಡ್ ಎಸ್ ಐ ಆರ್ ನಲ್ಲಿ ಬ್ಯುಸಿ ಆಗಿದೆ. ನೋಡೋಣ ಏನ್ ಮಾಡ್ತಾರಂತ” ಎಂದು ರಾಜಣ್ಣ ತಿಳಿಸಿದ್ದಾರೆ.