Home ಜಿಲ್ಲೆ ಕಲಬುರಗಿ ಸಾಹಿತ್ಯ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲಿ: ಡಾ.ಖಾಜಾವಲಿ ಈಚನಾಳ

ಸಾಹಿತ್ಯ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲಿ: ಡಾ.ಖಾಜಾವಲಿ ಈಚನಾಳ

ಜೇವರ್ಗಿ: ಸಾಹಿತ್ಯ ಕೇವಲ ಸಮಾಜದ ಪ್ರತಿಬಿಂಬ ಮಾತ್ರ ಅಲ್ಲ. ಅದು ಸಮಾಜವನ್ನು ಬದಲಾಯಿಸುವ ಪ್ರೇರಕ ಶಕ್ತಿಯೂ ಆಗಿದೆ. ಸಾಹಿತ್ಯ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸ ಬೇಕು. ಲೇಖಕರು ಶೋಷಿತರ, ದಮನಿತರ, ಮಹಿಳೆಯರ, ರೈತರ, ಕಾರ್ಮಿಕರ, ಅಂಚಿನ ಸಮುದಾಯಗಳ ನೋವುಗಳಿಗೆ ಧ್ವನಿಯಾಗಬೇಕು. ಮಾನವೀಯ ಮೌಲ್ಯಗಳು ಸಾಮಾಜಿಕ ನ್ಯಾಯ, ಸಮಾನತೆ ಸಹಬಾಳ್ವೆ ಮತ್ತು ವೆ?ಚಾರಿಕ ಪ್ರಜ್ಞೆಯನ್ನು ಸಾಹಿತಿ ತನ್ನ ಸಾಹಿತ್ಯದ ಮೂಲಕ ಕಟ್ಟಿಕೊಡ ಬೇಕು ಎಂದು ಸಾಹಿತಿ ಪ್ರಾಧ್ಯಾಪಕ ಡಾ. ಖಾಜಾವಲಿ ಈಚನಾಳ ಪ್ರತಿಪಾದಿಸಿದರು.
ಅವರು ಜೇವರ್ಗಿ ತಾಲೂಕ ಎಂಟನೇ ಸಾಹಿತ್ಯ ಸಮ್ಮೇಳನದಲ್ಲಿ ಮೊದಲನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕನ್ನಡಿಗರ ದೀರ್ಘ ಹೋರಾಟದ ಫಲದಿಂದ ಕರ್ನಾಟಕ ರಾಜ್ಯದ ಉದಯವಾಯಿತು. ಏಕೀಕರಣದ ಉದ್ದೇಶ ಕೇವಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವುದಷ್ಟೇ ಆಗಿರಲಿಲ್ಲ. ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸುವುದು,
ಭಾಷಿಕ ಮತ್ತು ಸಾಂಸ್ಕøತಿಕ ಅಸ್ಮಿತೆ ಉಳಿಸುವುದು, ಪ್ರಾದೇಶಿಕ ಅಸಮಾನತೆ ನಿವಾರಿಸುವುದು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧಿಸುವುದು ಏಕೀಕರಣದ ಮುಖ್ಯ ಆಶಯವಾಗಿತ್ತು. ಆದರೆ ಇಂದಿಗೂ ಕಲ್ಯಾಣ ಕರ್ನಾಟಕದ ಪ್ರದೇಶವು ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ನೀರಾವರಿ ಹಾಗೂ ಮೂಲಸೌಕರ್ಯ
ವಿಲ್ಲದೇ ಹಿಂದುಳಿದಿರುವು ದನ್ನು ಕಾಣುತ್ತೇವೆ. ಈ ಎಲ್ಲಾ ಅಸಮಾನತೆ ನಿವಾರಿಸುವ ಉದ್ದೇಶದಿಂದ 372(ಜೆ) ವಿಧಿಯನ್ನು ಜಾರಿಗೆ ತಂದರೂ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಗೋಷ್ಠಿಯಲ್ಲಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಜೇವರ್ಗಿ ತಾಲೂಕಿನ ಸಾಹಿತ್ಯ, ವಿಜಯಕುಮಾರ್ ರೋಣದ ಕರ್ನಾಟಕ ಏಕೀಕರಣ, ಹಾಗೂ ಡಾ. ಶ್ರೀನಿವಾಸ್ ವಸಂತ ಕುಷ್ಟಗಿಯವರು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೋವಿಂದರಾಜ್ ಅಲ್ದಾಳ ಅವರ ‘ಬದುಕು ಬರಹ’ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿವನಗೌಡ ಪಾಟೀಲ ಹಂಗರಗಿ, ಷಣ್ಮುಖ ಗೌಡ ಮಾಲಿ ಪಾಟೀಲ್, ಚಂದ್ರಶೇಖರ್ ಪಾಟೀಲ್ ಹರವಾಳ, ರವೀಂದ್ರ ಕೋಳಕೂರ್, ಭಗವಂತ ರಾಯ ಬೆಣ್ಣೂರ, ಜಗದೀಶ್ ವಿಶ್ವಕರ್ಮ, ಅಮೃತ ದೊಡ್ಡಮನಿ, ಮಲ್ಲಶೆಟ್ಟೆಪ್ಪ ಹಿರೇಗೌಡ್ರು, ಈಶ್ವರ ಹಿಪ್ಪರಗಿ ವೇದಿಕೆ ಮೇಲಿದ್ದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಕೆ ಬಿರಾದಾರ್, ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೋವಿಂದ ರಾಜ್ ಅಲ್ದಾಳ ಇನ್ನಿತರರು ಉಪಸ್ಥಿತರಿದ್ದರು.
ಎ. ಸಿ ತಾರಿವಾಳ ಮತ್ತು ಸುರೇಶ ಹಿರೇಮಠ ನಿರೂಪಿಸಿದರು. ರಾಜು ಮುದ್ದಡಗಿ ನಿರ್ವಹಣೆ ಮಾಡಿದರು. ಮಹೇಶ್ ಚಿಂತನಪಲ್ಲಿ ವಂದಿಸಿದರು.