
ಕಲಬುರಗಿ: ಗಾಂಧಿ ಎಂದರೇ ಒಂದು ಶಕ್ತಿ, ಗಾ ಎಂದರೆ, ಗರ್ವವನ್ನು ಬಿಟ್ಟವನು 0 ಜೀವನದ ಸಂಕೇತ ಧಿ ಎಂದರೆ ಧರ್ಮದಿಂದ ನಡೆಯುವುದು ಎಂದರ್ಥ. ಗಾಂಧೀಜಿ ದಾಸ್ಯವ ಧಿಕ್ಕರಿಸಿದ ಸ್ವಾಭಿಮಾನದ ದೀಪ ಮತ್ತು ಅನ್ಯಾಯವನ್ನು ಪ್ರತಿಭಟಿಸಿದ ಅಹಿಂಸೆಯ ದೀಪ ಎಂದು ವೇದಿಕೆಯ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ ಹೇಳಿದರು. ಕಿಶನರಾವ ಕುಲಕರ್ಣಿ ಲಾಲಬದ್ದೂರ ಶಾಸ್ತ್ರಿಯ ಕುರಿತು ಮಾತನಾಡುತ್ತಾ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದಾಗಿತ್ತು ಅವರ ಜೈ ಜವಾನ ಜೈ ಕಿಸಾನ ಘೋಷಣೆಯಿಂದ ಇಡೀ ರಾಷ್ಟ್ರವು ಒಂದಾಗಿತ್ತು. ಜೀವ ಜೀವನದ ತತ್ವ ಸತ್ವ ತೋರಿದ ಮಹಾನ ವ್ಯಕ್ತಿ ಶಾಸ್ತ್ರಿ, ರೈತ ಮತ್ತು ಯೋಧರ ಮಹತ್ವ ಸಾರಿದ ಧೀಮಂತ ವ್ಯಕ್ತಿ ಎಂದು ಹೇಳಿದರು.
ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಕರುಣೇಶ್ವರ ನಗರದಲ್ಲಿ ಗಾಂಧೀ ಹಾಗೂ ಲಲಾಬಹ್ದೂರ ಶಾಸ್ತ್ರಿ ಜಯಂತಿ ನಿಮಿತ್ಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮೀರ ಕುಲಕರ್ಣಿ, ರಮಾ ಕುಲಕರ್ಣಿ, ಅರ್ಪಿತಾ ಕುಲಕರ್ಣಿ, ಶಾಮರಾವ ಕುಲಕರ್ಣಿ, ಚಿದಂಬರ ದೇಶಪಾಂಡೆ, ರಾಜೇಶ, ಸಂತೋಷ, ವಿಜಯಲಕ್ಷ್ಮೀ, ಜಿ.ಎನ್.ನಾಯಕ, ಸಂತೋಷ ಕುಲಕರ್ಣಿ, ನೀಮಾ, ಶೀದೇವಿ, ಜಯಶ್ರೀ, ಅನುರಾಧಾ ವೀಣ, ನರೇಂದರ ಮಂತಾದವರು ಉಪಸ್ಥಿತರಿದ್ದರು.























