
ಬೀದರ: ನಗರದ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಮಹಾವಿದ್ಯಾಲಯದ ಆವರಣದ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿಯವರ ಮಾರ್ಗದರ್ಶನದಲ್ಲಿ ಬಿ.ವಿ. ಭೂಮರಡ್ಡ ಮಹಾವಿದ್ಯಾಲಯಲದಲ್ಲಿ ಮಹಾತ್ಮಗಾಂಧೀಜಿಯವರ ಹಾಗೂ ಲಾಲ್‍ಬಹಾದ್ದೂರಶಾಸ್ತ್ರೀ ಅವರÀ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಮಾತನಾಡುತ್ತಾ ಗಾಂಧೀಜಿಯವರ ಆದರ್ಶ ತತ್ವಗಳು ಭೂಮಿಯ ಮೇಲೆ ಸೂರ್ಯಚಂದ್ರಯಿರುವರೆಗೆ ಅಮರ ಅವರು ಸ್ವಾತಂತ್ರ್ಯಕ್ಕಾಗಿ ಬಳಸಿದ ಅಸ್ತ್ರಗಳೆಂದರೆ ಸತ್ಯ ಮತ್ತು ಅಹಿಂಸೆ, ಬ್ರೀಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ, ಕಾನೂನು ಭಂಗ ಚಳುವಳಿ, ಉಪ್ಪಿನ ಸತ್ಯಾಗ್ರಹ, ಬೆಳಗಾಂವ ಕಾಂಗ್ರೇಸ್ ಅಧಿವೇಶನ ಅಧ್ಯಕ್ಷತೆವಹಿಸಿ ಬ್ರೀಟಿಷರ ವಿರುದ್ಧ ಕರ್ನಾಟಕದಲ್ಲಿ ಗಾಂಧೀಜಿಯವರ ಅನುಯಾಯಿ ಆಗಿ ಹರ್ಡೇಕರ ಮಂಜಪ್ಪ, ಗಂಗಾಧರರಾವ ದೇಶಪಾಂಡೆ, ಎನ್.ಎಸ್. ಹರ್ಡೇಕರ, ಮೈಲಾರ ಮಹಾದೇವಪ್ಪ ಮುಂತಾದ ಸ್ವತಂತ್ರ್ಯ ಹೋರಾಟಗಾರರನ್ನು ಶಾಂತಿಯುತ ಚಳುವಳಿಗಳ ಮುಖಾಂತರ ಬ್ರೀಟಿಷರನ್ನು ಭಾರತದಿಂದ ಬುಡಸಮೇತ ಓಡಿಸಬೇಕು ರಾಷ್ಟ್ರ ಮಾತೆಯಾದ ಭಾರತಾಂಬೆÉಯನ್ನು ಬ್ರೀಟಿಷ್ ಸಂಕೋಲೆಯಿಂದ ಹೊರತಂದು ಮುಕ್ತಗೊಳಿಸಬೇಕು ಎಂದು ಕರೆಕೊಟ್ಟರು, ಹಾಗೂ ಇಂತಹ ದಿನದಂದು ಗಾಂಧೀಜಿಯವರ ಆದರ್ಶವನ್ನು ಇಟ್ಟುಕೊಂಡು ಜೀವನದಲ್ಲಿ ವಿದ್ಯಾರ್ಥಿಗಳಲ್ಲಿ ಮೈಗೂಡಿಸಿಕೊಳ್ಳಬೇಕೆಂದು ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಹಾವಿದ್ಯಾಲಯದ ಮಹಾವಿದ್ಯಾಲಯುದ ಪ್ರಾಂಶುಪಾಲರಾದ ಡಾ. ದೀಪಾ ರಾಗ ಎನ್.ಸಿ.ಸಿ. ಅಧಿಕಾರಿಗಳಾದ ಶ್ರೀ ಮಾರುತಿ ಭೀಮಣ್ಣಾ, ಎನ್.ಎಸ್.ಎಸ್. ‘ಅ’ ಘಟಕ ಅಧಿಕಾರಿಯಾದ ಡಾ. ಲಕ್ಷ್ಮೀ ವಿಶ್ವನಾಥ, ಎನ್.ಎಸ್.ಎಸ್. ‘ಬ’ ಘಟಕ ಅಧಿಕಾರಿಯಾದ ಶ್ರೀ ಬಸವರಾಜ ಎಸ್. ಬಿರಾದಾರ, ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೆಗೆದುಕೊಂಡು ಮಹಾವಿದ್ಯಾಲಯ ಹಾಗೂ ಮುಕ್ತಿ ಮಂದಿರದ ಪ್ರಾರಂಗಣವನ್ನು ಸ್ವಚ್ಛಗೊಳಿಸಿದರು, ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.























