Home ಜಿಲ್ಲೆ ಕಲಬುರಗಿ ಮಹಾತ್ಮ ಗಾಂಧಿಜಿ ಕುಷ್ಠರೋಗಿಗಳ ಕಾಲೋನಿಗೆ ಆರೋಗ್ಯ ಅಧಿಕಾರಿಗಳ ಭೇಟಿ

ಮಹಾತ್ಮ ಗಾಂಧಿಜಿ ಕುಷ್ಠರೋಗಿಗಳ ಕಾಲೋನಿಗೆ ಆರೋಗ್ಯ ಅಧಿಕಾರಿಗಳ ಭೇಟಿ

ಕಲಬುರಗಿ,ಅ.04: ನಗರದ ಮಹಾತ್ಮ ಗಾಂಧಿಜಿ ಕುಷ್ಠರೋಗಿಗಳ ಕಾಲೋನಿಗೆ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಶುಕ್ರವಾರ ಭೇಟಿ ನೀಡಿ, ಆರೋಗ್ಯ ತಪಾಸಣೆ ಜೊತೆಗೆ ಕಣ್ಣಿನ ಪರೀಕ್ಷೆ ನಡೆಸಿ ಉಚಿತ ಕನ್ನಡಕಗಳನ್ನು ಹಾಗೂ ಕುಷ್ಠರೋಗಿಗಳಿಗೆ ಅಗತ್ಯವಿರುವ ಒಅಖ ಪಾದರಕ್ಷೆಗಳು ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೋನಿಯ ಕುಷ್ಠರೋಗಿಗಳಿಗೆ ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದ ಸದಸ್ಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ರವಿಕಾಂತಿ ಎಸ್. ಕ್ಯಾತನಾಳ ಹಾಗೂ ನಗರ ಆರೋಗ್ಯ ಕೇಂದ್ರ ಮಾಣಿಕೇಶ್ವರಿಯ ವೈದ್ಯಾಧಿಕಾರಿ ಡಾ. ಅಮೀರ ಪಾಶಾ ಭಾಗವಹಿಸಿದ್ದರು.
ಕುಷ್ಠರೋಗ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ವರ್ಗ, ನೇತ್ರ ವಿಭಾಗದ ನೇತ್ರಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.