Home ಜಿಲ್ಲೆ ಕಲಬುರಗಿ ಶಿವಕುಮಾರ ಗೋಗಿ ಅವರಿಗೆ ವಯೋನಿವೃತ್ತಿ ಬೀಳ್ಕೊಡುಗೆ ಹಾಗೂ ಸನ್ಮಾನ

ಶಿವಕುಮಾರ ಗೋಗಿ ಅವರಿಗೆ ವಯೋನಿವೃತ್ತಿ ಬೀಳ್ಕೊಡುಗೆ ಹಾಗೂ ಸನ್ಮಾನ

ಕಲಬುರಗಿ,ಅ.04: ಸ್ಥಳೀಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿವಕುಮಾರ ಗೋಗಿ ಅವರಿಗೆ ಸೆ. 30 ರಂದು ಸಂಸ್ಥೆಯ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಡಾ. ಪರಮೇಶ್ವರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಅಜಯಕುಮಾರ, ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ತಿಪ್ಪೇಸ್ವಾಮಿ, ಮುಖ್ಯ ಗ್ರಂಥಾಲಯಾಧಿಕಾರಿ ಶರಣಬಸಪ್ಪ ಪಾಟೀಲ ಹಾಗೂ ಗ್ರಂಥಪಾಲಕ ಸಿದ್ಧರಾಮ ಕೆ. ದೇವತ್ಕಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿವಕುಮಾರ ಗೋಗಿ ಹಾಗೂ ಅವರ ಧರ್ಮಪತ್ನಿ ಸಾವಿತ್ರಿಬಾಯಿ ದಂಪತಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗ, ವಿವಿಧ ಗ್ರಂಥಾಲಯಗಳ ಮೇಲ್ವಿಚಾರಕರು ಹಾಗೂ ಬಂಧುಮಿತ್ರರು ಭಾಗವಹಿಸಿದ್ದರು.
ಅನಿಲಕುಮಾರ ಬಿರಾದಾರ ಸ್ವಾಗತಿಸಿದರು. ಶರಣಪ್ಪ ಸಿ. ಮಲಕೂಡ ಕಾರ್ಯಕ್ರಮ ನಿರೂಪಿಸಿ, ಮಲ್ಲಿನಾಥ ದೊಡ್ಡಮನಿ ವಂದಿಸಿದರು.