Home ಜಿಲ್ಲೆ ಕಿತ್ತೂರ ರಾಣಿ ಚನ್ನಮ್ಮ ವಿಜಯೋತ್ಸವ

ಕಿತ್ತೂರ ರಾಣಿ ಚನ್ನಮ್ಮ ವಿಜಯೋತ್ಸವ


ಲಕ್ಷ್ಮೇಶ್ವರ,ನ.೨೨: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನಾ ಶಕ್ತಿ, ಒಗ್ಗಟ್ಟು, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾರುವ ಅಪೂರ್ವ ದೃಶ್ಯಕ್ಕೆ ಶನಿವಾರ ಪಟ್ಟಣ ಸಾಕ್ಷಿಯಾಯಿತು. ಪಂಚಮಸಾಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರ ರಾಣಿ ಚನ್ನಮ್ಮನ ವಿಜಯೋತ್ಸವ/ಜಯಂತೋತ್ಸವ ತಾಲೂಕು ಮಟ್ಟದ ಜಾಗೃತ ಸಮಾವೇಶದ ನಿಮಿತ್ತ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಮಾಜ ಬಾಂಧವರು ಪಾಲ್ಗೊಂಡು ಸಂಭ್ರಮದ ಮೆರುಗು ನೀಡಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದ ನೂರಾರು ಮಹಿಳೆಯರ ಸಾಲು, ಡೊಳ್ಳು, ನಂದಿಕೋಲು ಕುಣಿತ, ಅಲಂಕೃತ ಚನ್ನಮ್ಮನ ಮತ್ತುರಾಯಣ್ಣನ ಮೂರ್ತಿ, ಎತ್ತಿನ ಚಕ್ಕಡಿ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ವೈಭವವನ್ನು ಇಮ್ಮಡಿಗೊಳಿಸಿತು.


ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪಟ್ಟಣದ ಪಂಪ ವೃತ್ತದಿಂದ ಆರಂಭಗೊAಡ ಮೆರವಣಿಗೆಗೆ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ ಹಾಗೂ ಜಿ.ಎಸ್. ಗಡ್ಡದೇವರಮಠ ಚಾಲನೆ ನೀಡಿದರು. ಸಮಾಜದ ನೂತನ ತಾಲೂಕು ಅಧ್ಯಕ್ಷ ಶಂಕರ ರಾಗಿ ಸೇರಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.


ಮೆರವಣಿಗೆ ಆರಂಭವಾಗುತ್ತಿದ್ದAತೆ ವಾದ್ಯಮೇಳಗಳ ಮೊಳಗುವಿಕೆ, ಕಲಾತಂಡಗಳ ಲಯಬದ್ಧ ಹೆಜ್ಜೆ ಹಾಗೂ ಸಮಾಜ ಬಾಂಧವರ ಉತ್ಸಾಹ ಇಡೀ ವಾತಾವರಣವನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿತು. ತಲೆಯ ಮೇಲೆ ಪೂರ್ಣಕುಂಭ ಹೊತ್ತು ಸಾಲುಗಟ್ಟಿ ಸಾಗಿದ ಸಾವಿರದಷ್ಟು ಮಹಿಳೆಯರು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ಸಾಂಪ್ರದಾಯಿಕ ಉಡುಗೆ, ಭಕ್ತಿಭಾವ ಮತ್ತು ಶಿಸ್ತಿನ ಹೆಜ್ಜೆಗಳೊಂದಿಗೆ ಸಾಗಿದ ಮಹಿಳೆಯರ ತಂಡ ಸಮಾಜದ ಸಂಸ್ಕೃತಿ, ಧಾರ್ಮಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿತು.


ಈಚಲಕರಂಜಿಯ ಯುವ ತಂಡದ ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು. ಸೊರಟೂರ ಹಾಗೂ ಗೊಜನೂರಿನ ನಂದಿಕೋಲು ಕುಣಿತ, ಸೂರಣಗಿಯ ಡೊಳ್ಳು ವಾದನ, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾತಂಡಗಳು ತಮ್ಮ ಕಲಾಪ್ರತಿಭೆಯ ಮೂಲಕ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಕಲಾವಿದರ ಲಯಬದ್ಧ ಹೆಜ್ಜೆ, ವಾದ್ಯಗಳ ನಿನಾದಕ್ಕೆ ಹೆಜ್ಜೆ ಹಾಕಿದ ಯುವಕರು ಹಾಗೂ ಸಮಾಜದ ಹಿರಿಯರ ಉತ್ಸಾಹ ಮೆರವಣಿಗೆಯನ್ನು ಮತ್ತಷ್ಟು ಆಕರ್ಷಕವಾಗಿಸಿತು. ಪಟ್ಟಣದ ಪ್ರಮುಖ ಬೀದಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕಲಾತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊAಡರು.


ಪAಪ ವೃತ್ತದಿಂದ ಆರಂಭಗೊAಡ ಮೆರವಣಿಗೆ ಬಸ್ತಿಕೆರಿ, ಹಳೇ ಬಸ್ ನಿಲ್ದಾಣದ ಚನ್ನಮ್ಮನ ವೃತ್ತ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮುಖ್ಯ ಬಜಾರ್ ರಸ್ತೆಯ ಮೂಲಕ ಗಂಟೆಗಟ್ಟಲೇ ಸಾಗಿದಾಗ ಜನರು ಮೆರವಣಿಗೆ ವೈಭವ ಕಣ್ತುಂಬಿಕೊAಡರು. ಯುವಕರು, ಮಹಿಳೆಯರು, ಹಿರಿಯರು, ವಿವಿಧ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಮೆರವಣಿಗೆಯ ಜನಾಕರ್ಷಣೆಗೆ ಸಾಕ್ಷಿಯಾಯಿತು.


ಮೆರವಣಿಗೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಂಕರ ರಾಗಿ, ಶಿರಹಟ್ಟಿ ತಾಲೂಕು ಅಧ್ಯಕ್ಷ ಬಸವರಾಜ ತುಳಿ, ಚನ್ನಪ್ಪ ಜಗಲಿ, ಶಿವಾನಂದ ದೇಸಾಯಿ, ಆನಂದಸ್ವಾಮಿ ಗಡ್ಡದೇವರಮಠ, ಪ್ರವೀಣ ಬಾಳಿಕಾಯಿ, ಶರಣು ಗೋಡಿ, ಎಸ್.ಪಿ. ಬಳಿಗಾರ, ಸಣ್ಣೀರಪ್ಪ ಹಳ್ಳೆಪ್ಪನವರ, ಸೋಮಣ್ಣ ಡಾಣಗಲ್, ಚಂಬಣ್ಣ ಬಾಳಿಕಾಯಿ, ಬಸವರಾಜ ಬೆಟಗೇರಿ, ಡಿ.ವೈ. ಹುನಗುಂದ, ರಮೇಶ ದನದಮನಿ, ರಾಜೀವ ಕುಂಬಿ, ಫಕ್ಕಿರೇಶ ಕವಲೂರ, ಬಸವಣ್ಣಪ್ಪ ನಂದೆಣ್ಣವರ, ಶಿವಯೋಗಿ ಅಂಕಲಕೋಟಿ, ಪುಲಿಕೇಶಿ ಉಪನಾಳ, ಎಸ್.ಪಿ. ಪಾಟೀಲ, ಗಂಗಾಧರ ಮೆಣಸಿನಕಾಯಿ, ಸುನೀಲ ಮಹಾಂತಶೆಟ್ಟರ, ಶಿವಣ್ಣ ಮಾನ್ವಿ, ಶಿವರಾಜಗೌಡ ಪಾಟೀಲ, ಮಹಾದೇವಗೌಡ ನರಸಮ್ಮನವರ, ಬಸವರೆಡ್ಡಿ ಹನುಮರೆಡ್ಡಿ, ವಿರೂಪಾಕ್ಷಪ್ಪ ಆದಿ, ಮಂಜುನಾಥ ಹೊಗೆಸೊಪ್ಪಿನ, ಮಹಾಂತೇಶ ಹಳ್ಳೆಪ್ಪನವರ, ರಾಮಣ್ಣ ಲಮಾಣಿ, ಲಲಿತಕ್ಕ ಕೆರಿಮನಿ, ರುದ್ರಪ್ಪ ಉಮಚಗಿ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿರಿಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.