
ಹುಬ್ಬಳ್ಳಿ, ನ೨೧: ಕಾರ್ತಿಕ ಮಾಸದ ಅಂಗವಾಗಿ ಹಳೇಹುಬ್ಬಳ್ಳಿಯ ಅರವಿಂದನಗರದಲ್ಲಿರುವ ಮಾತೆ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ನೆರವೇರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀಮತಿ ಗೀತಾ ಸಿ.ಡಿ ರವರು ದೀಪ ಬೆಳಗಿಸುವ ಮೂಲಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ತಹಶೀಲ್ದಾರ ಮಹೇಶ ಗಸ್ತೆ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಸಿ. ವಿ.ಎಸ್.ವಿ ಪ್ರಸಾದ, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾದ ಸದಾನಂದ ಡಂಗನವರ ಮಾತನಾಡಿದರು.
ದೇವಸ್ಥಾನದ ವತಿಯಿಂದ ಮಾತೋಶ್ರೀ ಅಮ್ಮನವರು ಗಣ್ಯಮಾನ್ಯರಿಗೆ ಗೌರವಿಸಿದರು.
ಹುಬ್ಬಳ್ಳಿಯ ರೇಲ್ವೆಸ್ ವಿಶೇಷ ನ್ಯಾಯಿಕ ದಂಡಾಧಿಕಾರಿಗಳಾದ ಸುಧೀರ ಕಾಕಡೆ, ಡಾ. ಡಿ.ಟಿ.ಪಾಟೀಲ, ಮುಖಂಡರಾದ ತೋಟಪ್ಪ ನಿಡಗುಂದಿ, ಶ್ರೀಮತಿ ಶ್ರೀದೇವಿ ಧೂಪದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಲಕ್ಷö್ಮಣರಾವ್ ಸರ್ಯವಂಶಿ, ಶಂಕರಗೌಡ ಚುಳಕಿ, ಹನಮಂತಪ್ಪ ಧೂಪದ, ಬಸವಂತಪ್ಪ ಅನವಾಲ, ಡಾ. ನಾಗರಾಜ ಭಾವಿಕಟ್ಟಿ, ರವಿ ಕಾಕಡೆ, ಶಿವಾನಂದ ಗೊಂಬಿ, ಶ್ರೀಧರ ತಾಂಬೆ, ಶ್ರೀಧರ ಕನಮಕಲ್, ನಾಗರಾಜ ಮಾಸಣಗಿ, ಪ್ರಕಾಶ ಅರಗಂಜಿ, ಅಜಯ ಶೇರಖಾನೆ, ವಿರುಪಾಕ್ಷ ಚಲವಾದಿ, ವಾಗೇಶಗೌಡ ಪಾಟೀಲ, ಮೂರ್ತಿ ಕಲಾವಿದ ಮಧುಪ್ರಕಾಶ ಗದಗ, ಪ್ರವೀಣ ಕೋಪರ್ಡೆ, ಪರಶುರಾಮ ಸುಳ್ಳದ, ಶ್ರೀಮತಿ. ಪಾರ್ವತಿದೇವಿ ಪಾಟೀಲ, ಗೀತಾ ಬದ್ದಿ, ಅನಿತಾ ಬಾಣದ, ದೀಪಾ ಲದವಾ, ಪದ್ಮಾ ದಿವಟೆ, ಪೂರ್ಣಿಮಾ ಕ್ಷೀರಸಾಗರ, ರೂಪಾ ಗೊಂಬಿ, ಆಶಾ ರಜಪೂತ, ಶಾಂತಾ ಗಡಾದ, ಯೋಗಿಣಿ ಶೆಲ್ಲಿಕೇರಿ, ರೂಪಾ ಮಗಜಿ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಗುರು ಬನ್ನಿಕೊಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.




















