
ಕಲಬುರಗಿ,ನ.24: ಜಗತ್ತಿನಲ್ಲಿ ಇಂದು ಎಲ್ಲೆಲ್ಲೂ ಅಶಾಂತಿತಾಂಡವವಾಡುತ್ತಿದ್ದು ಮನುಕುಲ ನಿತ್ಯ ಹಿಂಸೆಯಿಂದ
ನೆರಳುತ್ತಿದ್ದು ಸಮಾಜಕ್ಕೆ ಇಂದು ಶಾಂತಿ ಅತ್ಯಗತ್ಯವಾಗಿದ್ದು,ಜೈನ ಧರ್ಮದ ಅಹಿಂಸೆ, ಶಾಂತಿ ಮತ್ತು ಪರಸ್ಪರ ಸಹಬಾಳ್ವೆಹಾಗೂ ಮಾನವೀಯ ಮೌಲ್ಯಗಳಿಂದು ಪ್ರತಿಯೊಬ್ಬರಿಗೂ ಮುಟ್ಟಿಸುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಶಾಸಕ ದತ್ತಾತ್ರೆಯ ಸಿ. ಪಾಟೀಲ ರೇವೂರ ನುಡಿದರು.
ಕಲಬುರಗಿ ನಗರದ ಶ್ರೀ 1008 ಆದಿನಾಥ ದಿಗಂಬರ ಜೈನಮಂದಿರದ ವತಿಯಿಂದ ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಪರಮಪೂಜ್ಯ ಆಚಾರ್ಯ ಶ್ರೀ 108 ಆರ್ಷಕೀರ್ತಿ ಮುನಿಮಹಾರಾಜರ ಸಾನಿಧ್ಯದಲ್ಲಿ ಜೈನ ಧರ್ಮದ ಪವಿತ್ರ ಅಷ್ಠಾನಿಕಪರ್ವದನಿಮಿತ್ಯ ಆಯೋಜಿಸಿದ ಸಿದ್ಧಚಕ್ರ ಆರಾಧನಾ ಮಹೋತ್ಸವಸಮಾರಂಭದಲ್ಲಿ ಪರಮಪೂಜ್ಯ 108 ಶೃತಸಾಗರ ಮಹಾರಾಜರಜೀವನಾಧಾರಿತ ಕೃತಿ ಲೋಕಾರ್ಪಣೆ ಮಾಡಿದ ರೇವೂರ ರವರು
ಜೈನ ಧರ್ಮದ ಬದುಕು ಮತ್ತು ಬದುಕಲು ಬಿಡು ಎನ್ನುವವಾಕ್ಯ ಅತ್ಯಂತ ಮಹತ್ವದ್ದಾಗಿದ್ದು ಪರಸ್ಪರ ಪ್ರೀತಿಸುವ
ಪ್ರತಿಯೊಬ್ಬರನ್ನೂ ಮಾನವೀಯತೆಯಿಂದ ಕಾಣುವ, ಸರ್ವರಿಗೂಸಮಬಾಳು ಎನ್ನುವ ಮಹತ್ವದ ಉದ್ದೇಶ, ಸದ್ಭಾವನೆ ಸಮಾಜದಉನ್ನತ ಮೌಲ್ಯಗಳನ್ನು ಹೊಂದಿದ್ದು ಮನುಷ್ಯ ನೆಮ್ಮದಿಗಾಗಿಮತ್ತು ಮೋಕ್ಷಕ್ಕಾಗಿ ಜೈನ ಧರ್ಮದ ಪವಿತ್ರವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಪೂಜ್ಯ ಕ್ಷುಲ್ಲಕ ಮುನಿಗಳಾದ ಸುಪ್ರಭಾತ ಸಾಗರಮಹಾರಾಜರು, ಗುಜರಾತಿನ ಪೂಜ್ಯ ಅರಿಹಂತ ಕೀರ್ತಿ ಭಟ್ಟಾರಕ
ಸ್ವಾಮಿಜಿ, ಸ್ವಾತಿ ದೀದಿಯವರ ಉಪಸ್ಥಿತಿಯಲ್ಲಿ ಸಮಾಜದ ಅಧ್ಯಕ್ಷ ನಾಗನಾಥ ಚಿಂದೆ, ಸುಭಾಷ ಪಾಟೀಲ, ಧರಣೇಂದ್ರ ಕಣಮುಸೆ,ರಮೇಶ ಗಡಗಡೆ, ಶ್ರೇಣಿಕ ಡೊಳ್ಳೆ, ಪ್ರಕಾಶ ಜೈನ್, ಅನೀಲಕುಲಕರ್ಣಿ, ಸುರೇಶ ತಂಗಾ, ಪಾರ್ ಬೆಳಕೇರಿ, ಧರಣೇಂದ್ರಸಂಗಮಿ, ಅಭಿನಯ ಚಿಂದೆ, ಅಭಿಜೀತ ಚಿಂದೆ, ಬ್ರಹ್ಮ ಜಗಶೆಟ್ಟಿ, ದೀಪಕ
ಪಂಡಿತ, ಬಾಹುಬಲಿ ಪಂಡಿತ ಆಲಗೂರ, ವೀರಶೈವ ಸಮಾಜದಮುಖಂಡರಾದ ನಾಗಲಿಂಗಯ್ಯ ಮಠಪತಿ ಸೇರಿದಂತೆ ಸಮಾಜದ ಪ್ರಮುಖರು, ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.





















