Home ಜಿಲ್ಲೆ ಕಲಬುರಗಿ 5.61 ಲಕ್ಷ ರೂ.ವಂಚನೆ

5.61 ಲಕ್ಷ ರೂ.ವಂಚನೆ

ಕಲಬುರಗಿ,ನ.23-ಸ್ಟಾಕ್ ಮಾರ್ಕೆಟ್‍ನ ವಿವಿಧ ಪ್ಲಾಟ್ ಫಾರಂಗಳಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಪ್ರಾಫಿಟ್ ಮಾಡಬಹುದೆಂದು ಸುಳ್ಳು ಹೇಳಿ ನಂಬಿಸಿ ವ್ಯಕ್ತಿಯೊಬ್ಬರಿಗೆ 5,61,105 ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಬ್ರಹ್ಮಪುರ ಧನಗರಗಲ್ಲಿಯ ಸಿದ್ದಲಿಂಗ ರಾವೂರ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಿದ್ದಲಿಂಗ ರಾವೂರ ಅವರು ಕಳೆದ 2-3 ವರ್ಷಗಳಿಂದ ಆನ್ಲೈನ್ ಮೂಲಕ ಷೇರು ಮಾರ್ಕೆಟ್‍ನಲ್ಲಿ ಟ್ರೇಡಿಂಗ್ ಮಾಡುವ ಹವ್ಯಾಸ ಇರಿಸಿಕೊಂಡಿದ್ದು, ಇವರ ಮೊಬೈಲ್‍ನ ವಾಟ್ಸಪ್‍ಗೆ ಮುಂಬೈನ್‍ನ ಅಕ್ಷಯ ಠಾಕೂರ್, ದೆಹಲಿಯ ಅಜೆಯ ಶರ್ಮಾ, ಬೆಂಗಳೂರಿನ್ ಅರಹನ್ ಮಾಲಿಕ್, ವಿನೀತ್ ಮತ್ತು ಮುಂಬೈನ್‍ನ ವಿಶಾಲ್ ಎಂಬುವವರು ಕರೆ ಮಾಡಿ ಸ್ಟಾಕ್ ಮಾರ್ಕೆಟ್‍ನ ವಿವಿಧ ಪ್ಲಾಟ್ ಫಾರಂಗಳಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಸುಳ್ಳು ಹೇಳಿ ನಂಬಿಸಿ ಸಿದ್ದಲಿಂಗ ರಾವೂರ ಮತ್ತು ಅವರ ಮಗಳ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 5,61,105 ರೂ.ಪಡೆದುಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ಸಿದ್ದಲಿಂಗ ರಾವೂರ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.