Home ಜಿಲ್ಲೆ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಸಾಂಸ್ಕøತಿಕ ಚಟುವಟಿಕೆ ಮಹತ್ವದ್ದು

ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಸಾಂಸ್ಕøತಿಕ ಚಟುವಟಿಕೆ ಮಹತ್ವದ್ದು

ಬೀದರ್ ;ನ.21. ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ಸಾಂಸ್ಕøತಿಕ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಹಳ್ಳಿಖೇಡ(ಬಿ)ಯ ಬಸವತೀರ್ಥ ವಿದ್ಯಾಪೀಠ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಯಿತು
ಅಂಕಗಳಿಸುವ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಉತ್ತಮ ವ್ಯಕ್ತಿತ್ವ, ಆತ್ಮ ವಿಶ್ವಾಸ ನಾಯಕತ್ವ ಮತ್ತು ಸಾಮಾಜೀಕ ಜವಾಬ್ದಾರಿಯನ್ನು ಹೊಂದಿರುವ ಪ್ರಜ್ಞಾವಂತ ನಾಗರಿಕರನ್ನು ರೂಪಿಸುವ ಶಿಕ್ಷಣದ ನಿಜವಾದ ಉದ್ದೇಶವಾಗಿದೆ.
ಜಿಲ್ಲಾ ಮಟ್ಟದ ಸಂಸ್ಕøತಿಕ ಕಾರ್ಯಕ್ರಮಗಳಮನ್ನು ಉದ್ಘಾಟಿಸಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಗಂಗಶೆಟ್ಟಿ ಅವರು ಮಾತನಾಡಿದರು. ಪದವಿ ಪೂರ್ವ ಶಿಕ್ಷಣವು ವಿದ್ಯಾಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿಯು ಭಾಗವಹಿಸಲು ಅವಕಾಶ ನೀಡುವುದು ಬಹಳ ಅವಶ್ಯಕ. ಸಂಸ್ಕøತಿಕ ಚಟುವಟಿಕೆಗಳು ವಿದ್ಯರ್ಥಿಯಲ್ಲಿರುವ ಸೂಪ್ತ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿ ಆಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷ ಕೇಶವರಾವ ತಳಘಟಕರ್ ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಸಂಸ್ಕಾರ ಮತ್ತು ಪ್ರತಿಭೆ, ಭಾರತೀಯ ಸಂಸ್ಕ್ರತಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯಅತಿಥಿಗಳಾಗಿ ಸೋಮಯ್ಯ ಹಿರೇಮಠ (ಬಸವತೀರ್ಥ ವಿದ್ಯಾಪೀಠ ಸ್ಥಳಿಯ ಸಮಿತಿ ಹಳ್ಳಿಖೇಡ-ಬಿ)ಅತಿಥಿಗಳಾಗಿ ಆಡಳಿತಾಧಿಕಾರಿ ಗುಂಡಯ್ಯಾ ತೀರ್ಥಾ, ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ಮನ್ಮಥ ಡೊಳೆ, ಶಿವರಾಜ ಬಿರಾದಾರ, ಶಿವರಾಜ ನಾಯಕ್, ಭಗವಾನ ಬಿರಾದಾರ, ಮಾಣಿಕರಡ್ಡಿ, ಸೂರ್ಯಕಾಂತ ಐನಾಪೂರೆ, ಮಸ್ತಾನ ಪಟೇಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಅಲ್ಲದೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜಿನ ಸುಮಾರು 200ಕ್ಕಿಂತಲು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.ಪ್ರಾಂಶುಪಾಲ ಮಸ್ತಾನ ಪಟೇಲ್
ಸ್ವಾಗತಿಸಿದರು. ವಿಜಯಲಕ್ಷ್ಮಿ ಮೇತ್ರೆ ನಿರೂಪಿಸಿದರು.ಉಪನ್ಯಾಸಕನರೇಂದ್ರ ಪಾಟೀಲ್ ವಂದನಾರ್ಪಣೆ ಮಾಡಿದರು