Home ಜಿಲ್ಲೆ ಅಂತಿಮ ಮತದಾರರ ಪಟ್ಟಿ ಅ.೨೭ ರಂದು ಪ್ರಕಟಣೆ

ಅಂತಿಮ ಮತದಾರರ ಪಟ್ಟಿ ಅ.೨೭ ರಂದು ಪ್ರಕಟಣೆ

ಧಾರವಾಡ, ಅ.೧೭: ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಕರಡು ಮತದಾರರ ಪಟ್ಟಿಯ ಪ್ರಕಾರ ಒಟ್ಟು ೧೩,೫೩,೯೪೬ ಮತದಾರರಿದ್ದಾರೆ. ಪರಿಷ್ಕೃತ ವೇಳಾಪಟ್ಟಿಯಂತೆ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ ೨೭ ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.


ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಭಾರತ ಚುನಾವಣಾ ಆಯೋಗದ ಪತ್ರ ಹಾಗೂ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಪರಿಷ್ಕೃತ ವೇಳಾಪಟ್ಟಿಯಂತೆ, ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂನ್ ೩೦ ರಿಂದ ಆಗಸ್ಟ್ ೧೭ ರವರೆಗೆ ಮತದಾರರ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುವ ಮತ್ತು ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಂಡಿದ್ದಾರೆ. ಆಗಸ್ಟ್ ೨೪ ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೩,೫೩,೯೪೬ ಮತದಾರರಿದ್ದು, ಅದರಲ್ಲಿ ೬,೭೫,೮೫೭ ಪುರುಷರು, ೬,೭೮,೦೨೩ ಮಹಿಳೆಯರು ಹಾಗೂ ೬೬ ಇತರೆ ಮತದಾರರಿದ್ದಾರೆ ಎಂದು ತಿಳಿಸಿದರು.


ಕ್ಷೇತ್ರವಾರು ಮತದಾರರ ವಿವರ: ನವಲಗುಂದ ೧,೯೩,೩೩೪ ಮತದಾರರು, ಕುಂದಗೋಳ ೧,೭೭,೪೨೫ ಮತದಾರರು, ಧಾರವಾಡ ೧,೯೩,೫೭೮ ಮತದಾರರು, ಹುಬ್ಬಳ್ಳಿ-ಧಾರವಾಡ ಪೂರ್ವ ೧,೮೧,೩೩೪ ಮತದಾರರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ೨,೦೪,೩೧೪ ಮತದಾರರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ೨,೧೭,೧೯೫ ಮತದಾರರು, ಕಲಘಟಗಿ ೧,೮೬,೭೬೬ ಮತದಾರರು ಸೇರಿ ಒಟ್ಟು ೧೩೫೩೯೪೬ ಮತದಾರರು ಕರಡು ಪಟ್ಟಿಯಲ್ಲಿ ಇದ್ದಾರೆ.


ಮತಗಟ್ಟೆಗಳ ವಿವರ: ಭಾರತ ಚುನಾವಣಾ ಆಯೋಗದ ಅನುಮೋದನೆಯ ನಂತರ ಜಿಲ್ಲೆಯಲ್ಲಿ ಒಟ್ಟು ೧,೭೦೭ ಮತಗಟ್ಟೆಗಳನ್ನು ಗುರುತಿಸಲಾಗಿದೆ. ನವಲಗುಂದದಲ್ಲಿ ೨೪೨, ಕುಂದಗೋಳದಲ್ಲಿ ೨೧೯, ಧಾರವಾಡದಲ್ಲಿ ೨೪೭, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ೨೨೭, ಸೆಂಟ್ರಲ್‌ನಲ್ಲಿ ೨೬೭, ಪಶ್ಚಿಮದಲ್ಲಿ ೨೬೭ ಹಾಗೂ ಕಲಘಟಗಿಯಲ್ಲಿ ೨೩೮ ಮತಗಟ್ಟೆಗಳು ಸೇರಿ ಒಟ್ಟು ೧,೭೦೭ ಮತಗಟ್ಟೆಗಳಿವೆ. ಮತಗಟ್ಟೆಯಾದಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಂಬAಧಪಟ್ಟ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ, ಗ್ರಾಮ ಪಂಚಾಯತ, ತಾಲೂಕು ಪಂಚಾಯತಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.


೭೦,೮೪೪ ಅರ್ಜಿಗಳ ಸ್ವೀಕೃತಿ: ಜೂನ್ ೧೬ ರಿಂದ ಅಕ್ಟೋಬರ್ ೧೪ ರವರೆಗೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮೂನೆ-೬ ಗೆ ೨೬,೮೭೨ ಅರ್ಜಿಗಳು, ನಮೂನೆ-೬ಎ ಗೆ ೭೬ ಅರ್ಜಿಗಳು, ನಮೂನೆ-೭ ಗೆ ೪,೩೭೬ ಅರ್ಜಿಗಳು ಮತ್ತು ನಮೂನೆ-೮ ಗೆ ೩೯,೫೨೦ ಅರ್ಜಿಗಳು ಸೇರಿ ಒಟ್ಟು ೭೦,೮೪೪ ಅರ್ಜಿಗಳು ಸ್ವೀಕೃತವಾಗಿವೆ.


೧೪,೩೧೬ ಯುವ ಮತದಾರರ ವಿವರ: ೧೮ ರಿಂದ ೧೯ ವರ್ಷದೊಳಗಿನ ಯುವ ಮತದಾರರು ಜಿಲ್ಲೆಯಲ್ಲಿ ಒಟ್ಟು ೧೪,೩೧೬ ಯುವ ಮತದಾರರಿದ್ದು, ಅವರಲ್ಲಿ ೭,೮೬೮ ಪುರುಷರು ಹಾಗೂ ೬,೪೪೮ ಮಹಿಳೆಯರಿದ್ದಾರೆ.


ನವಲಗುಂದದಲ್ಲಿ ೧೯೪೭, ಕುಂದಗೋಳದಲ್ಲಿ ೧೫೫೩, ಧಾರವಾಡದಲ್ಲಿ ೨೨೦೩, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ೨೨೯೦, ಸೆಂಟ್ರಲ್‌ನಲ್ಲಿ ೧೮೮೨, ಪಶ್ಚಿಮದಲ್ಲಿ ೨೧೬೬ ಹಾಗೂ ಕಲಘಟಗಿಯಲ್ಲಿ ೨೨೭೫ ಯುವ ಮತದಾರರಿದ್ದಾರೆ. ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿರುವುದನ್ನು ಪರಿಶೀಲಿಸಿಕೊಳ್ಳಬೇಕು. ಅರ್ಹ ಮತದಾರರು ನಿಗದಿತ ನಮೂನೆಗಳ ಮೂಲಕ ನೋಂದಣಿ, ತಿದ್ದುಪಡಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.


ವಿಶೇಷ ಮತದಾರರ ನೋಂದಣಿ ಅಭಿಯಾನ: ಮತದಾರರ ನೋಂದಣಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಗಸ್ಟ್ ೨೯ ಮತ್ತು ೩೦ ಹಾಗೂ ಸೆಪ್ಟೆಂಬರ್ ೧೯ ಮತ್ತು ೨೦ ರಂದು ವಿಶೇಷ ನೋಂದಣಿ ಅಭಿಯಾನಗಳನ್ನು ಆಯೋಜಿಸಲಾಗಿತ್ತು. ಅಭಿಯಾನಗಳ ಸಂದರ್ಭದಲ್ಲಿ ಹೊಸ ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆಗಳಿಗೆ ಸಂಬAಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ: ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳು ಹಾಗೂ ಪರಿಶೀಲನೆಗೆ ಸಂಬAಧಿಸಿದ ನೋಟಿಸ್‌ಗಳ ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ. ಅಕ್ಟೋಬರ್ ೧೬ ವರೆಗಿನ ವರದಿಯ ಪ್ರಕಾರ, ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೪೭,೯೭೮ ನೋಟಿಸ್‌ಗಳನ್ನು ಸಿದ್ಧಪಡಿಸಿ, ವಿತರಿಸಲಾಗಿದ್ದು, ಅವುಗಳನ್ನು ಸಂಬAಧಪಟ್ಟ ಮತದಾರರಿಗೆ ತಲುಪಿಸುವ ಮತ್ತು ವಿಚಾರಣೆ ನಡೆಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.


ಅಕ್ಟೋಬರ್ ೨೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಪರಿಷ್ಕೃತ ವೇಳಾಪಟ್ಟಿಯಂತೆ ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ ಕಾರ್ಯವನ್ನು ಅಕ್ಟೋಬರ್ ೨೨ ರವರೆಗೆ ಕೈಗೊಳ್ಳಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ ೨೭ ರಂದು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿಗೆ ಸಂಬAಧಿಸಿದAತೆ ಅರ್ಹರು ಸಂಬAಧಪಟ್ಟ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ. ಡಿ. ಅವರು ಹೇಳಿದರು.


ಪತ್ರಿಕಾಗೋಷ್ಠಿಯ ನಂತರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ಜರುಗಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು ಉಪಸ್ಥಿತರಿದ್ದರು.


ಸಭೆಯಲ್ಲಿ ಪ್ರಕಾಶ ಹಳಿಯಾಳ, ಸಿದ್ದು ಕಲ್ಯಾಣಶೆಟ್ಟರ, ದೇವರಾಜ ಕಂಬಳಿ, ಮಂಜುನಾಥ ಹಗೆದಾರ, ಹಕ್ಕಮಹಮ್ಮದ ಗೊಲಂದಾಜ ಸೇರಿದಂತೆ ಇತರರು ಭಾಗವಹಿಸಿದ್ದರು.