Home ಜಿಲ್ಲೆ ಕಣ್ಣು ಜೀವನದ ಬೆಳಕು : ಪ್ರಸನ್ನ ಖಂಡ್ರೆ

ಕಣ್ಣು ಜೀವನದ ಬೆಳಕು : ಪ್ರಸನ್ನ ಖಂಡ್ರೆ

ಭಾಲ್ಕಿ : ಕಣ್ಣುಗಳು ವ್ಯಕ್ತಿ ಜೀವನದ ಬೆಳಕಾಗಿ ಕಾರ್ಯನಿರ್ವಹಿಸುತ್ತವೆ ಎಂದು ಯುವ ಮುಖಂಡ ಪ್ರಸನ್ನ ಖಂಡ್ರೆ ಅಭಿಪ್ರಾಯಪಟ್ಟರು.
ನಗರದ ಪವನ ಆಪ್ಟಿಕಲ್ಸ್ (ಡಾ.ಜಾಧವ ಆಸ್ಪತ್ರೆ ಹತ್ತಿರ) ಮುಂಭಾಗದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್(ಆರ್‍ಐ 3160) ಮತ್ತು ವ್ಹಿಜನ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಉದಯಗಿರಿ ಲಾಯನ್ಸ್ ನೇತ್ರಾಲಯ ಉದಗೀರ ಅವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಮೋತಿ ಬಿಂದು ಶಸ್ತ್ರಕ್ರಿಯೆ ಮತ್ತು ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣು ಮನುಷ್ಯನ ದೇಹದ ಪ್ರಮುಖ ಭಾಗ. ಸುಂದರ ಜಗತ್ತಿನ ಪ್ರಕೃತಿ ಸೌಂದರ್ಯ ಆನಂದಿಸಲು ಕಣ್ಣುಗಳು ಅಗತ್ಯವಾಗಿವೆ. ಕಣ್ಣು ಕಳೆದುಕೊಂಡ ವ್ಯಕ್ತಿ ಕತ್ತಲಲ್ಲೆ ತನ್ನ ಜೀವನ ಸಾಗಿಸಬೇಕಾಗುತ್ತದೆ.ಅತಿಯಾದ ಟಿವಿ,ಮೊಬೈಲ್ ಬಳಕೆಯಿಂದ ಇತ್ತೀಚೆಗೆ ಮಕ್ಕಳ ಕಣ್ಣಿನ ದೃಷ್ಠಿ ಕ್ಷೀಣಿಸುತ್ತಿರುವುದು ಖೇದರಕ ಸಂಗತಿ. ಭಾಲ್ಕಿ ರೋಟರಿ ಕ್ಲಬ್‍ನವರು ಬಡ ಜನರ ಏಳಿಗೆಗಾಗಿ ಪ್ರತಿ ವರ್ಷ ಉಚಿತ ನೇತ್ರ ಚಿಕಿತ್ಸೆ ಸೇರಿದಂತೆ ಹಲವು ಸಮಜೋಪಯೊಗಿ ಕಾರ್ಯಗಳು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿ, ರೋಟರಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ತಾಲೂಕು ರೋಟರಿ ಕ್ಲಬ್ ಕಾರ್ಯದರ್ಶಿ ಪ್ರೊ.ಅಶೋಕ ರಾಜೋಳೆ ಮಾತನಾಡಿ, ರೋಟರಿ ಕ್ಲಬ್‍ನಿಂದ ಇಲ್ಲಿವರೆಗೆ ಅಂದಾಜು ಎರಡು ಸಾವಿರ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಮಾಡಲಾಗಿದೆ. ಎಲ್ಲ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರ,ಪ್ರೋತ್ಸಾಹದಿಂದ ರೋಟರಿ ಕ್ಲಬ್ ಹಮ್ಮಿಕೊಳ್ಳುವ ರಚನಾತ್ಮಕ ಕಾರ್ಯಗಳು ಯಶಸ್ವಿಯಾಗುತ್ತಿವೆ. ಮುಂದಿನ ದಿನಗಳಲ್ಲಿ ರೋಗಿಗಳ ಸಹಾಯಕ್ಕಾಗಿ ಕ್ಲಬ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ಸೇವೆ ನೀಡಲಾಗುತ್ತದೆ ಎಂದು ತಿಳಿಸಿದರು.
ನೇತ್ರತಜ್ಞ ಡಾ.ಸಾಗರ ಸಮಗೆ ಮಾತನಾಡಿ, ಕಣ್ಣಿನಲ್ಲಿ ಪೊರೆ ಕಾಣಿಸಿಕೊಂಡಾಗ ಶಸ್ತ್ರ ಚಿಕಿತ್ಸೆ,ಗ್ಲುಕೋಮಾಗೆ ಲೇಸರ್ ಚಿಕಿತ್ಸೆ ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ.ಕಣ್ಣಿನ ಚಿಕಿತ್ಸೆಗಾಗಿ ನಿರ್ಲಕ್ಷ ಮಾಡಬೇಡಿ ಎಂದು ಸಲಹೆ ನೀಡಿದರು.
ತಪಾಸಣೆ: 56 ಜನರ ಕಣ್ಣುಗಳ ತಪಾಸಣೆ ಮತ್ತು 41 ಜನರಿಗೆ ಮೋತಿ ಬಿಂದು ಶಸ್ತ್ರಕ್ರಿಯೆಗೊಳಪಡಿಸಲಾಯಿತು.ಒಟ್ಟು 97 ಜನರಿಗೆ ತಪಾಸಣೆ ಮಾಡಲಾಯಿತು. ರೋಟರಿ ಖಜಾಂಚಿ ಅವಿನಾಶ ಮಾಲ್ಗೆ, ಸಚಿನ ನಿಲಂಕರ್, ಸಂದೀಪ ಕೊಟಗೆರೆ, ಡಾ.ವಸಂತ ಪವಾರ,ನ್ಯಾಯವಾದಿಗಳಾದ ಸಂಜಯ ನಾಯಕ್, ಸೌರಭ ನಾಯಕ,ಬಸವ ಪಾಟೀಲ್ ಮತ್ತು ಡಾ.ಯುವರಾಜ ಜಾಧವ, ಡಾ.ವಿಕ್ರಮ ದೇವಪ್ಪ, ಡಾ.ಶ್ರೀರಂಗ ಬಿರಾದಾರ, ಸಂಜಯಕುಮಾರ ಪಂಡರಗೆರೆ, ರೋ.ದತ್ತಾತ್ರಿ ಮೆಹಕ್ರೆ, ಡಾ.ಮಾಣಿಕಪ್ರಭು ಕೋಟೆ,ಡಾ.ಅನೀಲ ಹನಪಟ್ಟೆ, ಪವನ ಕೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯಾಯವಾದಿ ಸಾಗರ ನಾಯಕ್ ನಿರೂಪಿಸಿದರು. ಮಾಜಿ ಎ.ಜಿ ಡಾ.ಅಮೀತ ಅಷ್ಟೂರೆ ವಂದಿಸಿದರು.


`ಕಣ್ಣು ಕಳೆದುಕೊಂಡವರ ಜೀವನ ದು:ಖದಲ್ಲಿ ಸಾಗುತ್ತದೆ.ಕಣ್ಣಿನಿಂದಲೇ ನೈಜ ಜಗತ್ತಿನ ಸೌಂದರ್ಯ ಸವಿಯಬಹುದು. ಮಹಿಳೆಯರು ಅಡುಗೆಗಾಗಿ ಹೊಗೆರಹಿತ ಒಲೆಗಳನ್ನು ಬಳಸುವುದು ಉತ್ತಮ. ಸ್ವಾವಲಂಬಿ,ಸ್ವಾಭಿಮಾನಿ ಬದುಕಿಗೆ ಕಣ್ಣುಗಳು ನೆರವಾಗುತ್ತವೆ.’
– ಪ್ರಸನ್ನ ಖಂಡ್ರೆ ಯುವ ಮುಖಂಡರು ಭಾಲ್ಕಿ.