
ಬೆಂಗಳೂರು, ಆ.೨೭- ನೇಪಾಳದಲ್ಲಿ ಬಹಳ ದೊಡ್ಡ ದುರಂತ ಆಗಿದೆ. ದೇವರ ದರ್ಶನಕ್ಕೆ ಹೋದವರು ಬಹಳ ಮಂದಿ ನಾಪತ್ತೆ ಆಗಿದ್ದಾರೆ. ನಮಗೆಲ್ಲರಿಗೂ ದುಃಖ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನವದೆಹಲಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಂದಾಗಿರಬೇಕು
ಭಾರತ ಸರ್ಕಾರ ನೇಪಾಳಕ್ಕೆ ಆದಷ್ಟು ಹೆಚ್ಚಿನ ಸಹಾಯ ಮಾಡಬೇಕಿದೆ ಎಂದರು.
ಪ್ರವಾಹದಲ್ಲಿ ಭಾರತೀಯರು ನಾಪತ್ತೆಯಾಗಿದ್ದವರನ್ನು ಹುಡುಕಿ ಮನೆಗೆ ಕಳಿಸಬೇಕು. ಶವಗಳನ್ನು ಹುಡುಕಿ ಅವರ ಮನೆಗೆ ಕಳಿಸಬೇಕು ಎಂದು ಹೇಳಿದರು.
ಪ್ರವಾಹದಲ್ಲಿ ಸತ್ತವರ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಸಚಿವ ಸಂಪುಟ ಸರ್ಜರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಗಳು ಇಲ್ಲೇ ಇದ್ದಾರೆ ಅವರನ್ನೇ ಈ ಬಗ್ಗೆ ಕೇಳಿ ಎಂದು ಹೇಳಿ ಈ ಬಗ್ಗೆ ಹೆಚ್ಚು ಮಾತನಾಡಲಿಲ್ಲ.


































