Home ಜಿಲ್ಲೆ ಕಲಬುರಗಿ ಅಕಸ್ಮಿಕ ಬೆಂಕಿ ಅವಘಡಕ್ಕೆ ಎಲೆಕ್ಟ್ರಿಕ್ ಮಳಿಗೆಯ ಸಾಮಗ್ರಿಗಳು ಭಸ್ಮ

ಅಕಸ್ಮಿಕ ಬೆಂಕಿ ಅವಘಡಕ್ಕೆ ಎಲೆಕ್ಟ್ರಿಕ್ ಮಳಿಗೆಯ ಸಾಮಗ್ರಿಗಳು ಭಸ್ಮ

ಕಲಬುರಗಿ: ನಗರದ ಜೇವರಗಿ ಕ್ರಾಸ್ ಸಮೀಪದಲ್ಲಿರುವ ‘ರಿಷಿ ಎಲೆಕ್ಟ್ರಿಕ್ ಆ್ಯಂಡ್ ಎಂಟರ್ಪ್ರೈಸಸ್’ ಮಳಿಗೆಯಲ್ಲಿ ಸಂಭವಿಸಿದ ಆಕಸ್ಮೀಕ ಬೆಂಕಿ ಅವಘಡದಲ್ಲಿ ಸುಮಾರು 25 ಲಕ್ಷ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಮಳಿಗೆಯ ಒಳಭಾಗದಿಂದ ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣವೇ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯಚರಣೆ ಕೈಗೊಂಡು ಹೆಚ್ಚಿನ ಹಾನಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.
ಅಗ್ನಿಶಾಮಕ ದಳದ ಪ್ರಾದೇಶಿಕ ಕಚೇರಿ ಅಧಿಕಾರಿ ರವಿಕುಮಾರ ಚೌವ್ಹಾಣ ಅವರ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ ಮತ್ತು ಸಿಬ್ಬಂದಿಗಳ ತಂಡ ಬೆಂಕಿ ನಂದಿಸುವ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.