
ಲಕ್ಷೆ÷್ಮÃಶ್ವರ,ನ.೨೩: ಇದೀಗ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳು ಬಂದಿದ್ದು ಅವುಗಳ ಮೇಲೂ ಸಹ ಭೀಕರ ಬರಗಾಲದ ಛಾಯೆ ಪರಿಣಾಮ ಬೀರಿದಂತಿದೆ.
ಭೂತಾನ, ಮಧ್ಯ ಏಷ್ಯಾ, ಶ್ರೀಲಂಕಾ, ಜಮ್ಮು ಕಾಶ್ಮೀರ, ಲಡಾಖ ಸೇರಿದಂತೆ ಇತರೆಡೆಗಳಿಂದ ಮಾಗಡಿ ಕೆರಿಗೆ ಬರುವ ವಿದೇಶಿ ಪಕ್ಷಿಗಳಿಗೆ ಈ ಬಾರಿ ಆಹಾರ ಸಮಸ್ಯೆ ಎದುರಾಗಿದೆ.
ಪಕ್ಷಿಗಳು ಮಾಗಡಿ ಕೆರೆಯಲ್ಲಿ ಠಿಕಾಣಿ ಹೂಡಿ ಅವು ಸುತ್ತಮುತ್ತಲಿನ ಜಮೀನುಗಳಲ್ಲಿನ ಶೇಂಗಾಕಾಯಿ ಆಯ್ದು ತಿನ್ನುತ್ತಿದ್ದವು ಆದರೆ ಮುಂಗಾರಿನಲ್ಲಿ ರೈತರು ಶೇಂಗಾ ಬದಲು ಗೋವಿನ ಜೋಳ ಹೆಚ್ಚಾಗಿ ಬೆಳೆದಿದ್ದರಿಂದ ವಿದೇಶಿ ಪಕ್ಷಿಗಳಿಗೆ ಆಹಾರದ ಕೊರತೆ ಎದುರಾಗಿದೆ.
ಹಿಂಗಾರಿಯ ಮಳೆಯೂ ಕೈಕೊಟ್ಟು ಕಡಲೆ ಬಿತ್ತನೆ ಆಗದಿರುವುದರಿಂದ ಪಕ್ಷಿಗಳಿಗೆ ಕಡಲೆ ಬೆಳೆಯ ಮುಗುಳೂ ಲಭ್ಯವಾಗದೇ ಆಹಾರಕ್ಕಾಗಿ ಪರದಾಡುವಂತಾಗಿದೆ.
ಬದಲಾದ ಋತುಮಾನ ಪಕ್ಷಿಗಳ ಮೇಲೂ ಪ್ರಭಾವ ಬೀರಿದ್ದು ಆಹಾರದ ಕೊರತೆಯಿಂದ ಅವು ಮುಂದೇನು ಮಾಡುತ್ತವೆಯೋ? ಎಂಬ ಆತಂಕ ಪಕ್ಷಿ ಪ್ರೇಮಿಗಳಲ್ಲಿ ಉಂಟಾಗಿದೆ ಮಾಗಡಿ ಕೆರೆಯಿಂದ ನೂರಾರು ಕಿಲೋಮೀಟರು ದೂರ ಹೋಗಿ ಶೇಂಗಾ ಮತ್ತು ಕಡಲೆ ಬೆಳೆಯ ಮುಗುಳು ತಿನ್ನುತ್ತಿದ್ದ ಪಕ್ಷಿಗಳು ಆಹಾರವಿಲ್ಲದೆ ವಿಲವಿಲ ಎನ್ನುತ್ತಿವೆ ಎಂಬ ಆತಂಕಕಾರಿ ವಾತಾವರಣ ಈ ಭಾಗದಲ್ಲಿ ನರ್ಮಾಣವಾಗಿದೆ.





















