Home ಜಿಲ್ಲೆ ಗುರುಮಠಕಲ್‌ನಲ್ಲಿ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಗುರುಮಠಕಲ್‌ನಲ್ಲಿ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಗುರುಮಠಕಲ್,ಅ.೭: ಸ್ಥಳೀಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ೧೪ ಮತ್ತು ೧೭ ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗ ಮಟ್ಟದ ಬೃಹತ್ ವಾಲಿಬಾಲ್ ಪಂದ್ಯಾವಳಿಯು ಯಶಸ್ವಿಯಾಗಿ ನೆರವೇರಿತು.
ಯಾದಗಿರಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಮಾನಸಿಕ ಶಕ್ತಿ ಹಾಗೂ ಸಹಬಾಳ್ವೆಯ ಭಾವನೆಯನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿ ಮೆರೆಯಬೇಕು,” ಎಂದು ಕರೆ ನೀಡಿದರು. ವಿಭಾಗೀಯ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ವಿಜಯಪುರ, ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಬೀದರ್ ಸೇರಿ ಒಟ್ಟು ೭ ಜಿಲ್ಲೆಗಳಿಂದ ನೂರಾರು ಉದಯೋನ್ಮುಖ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪಂದ್ಯಾವಳಿಯ ಅಂತಿಮ ಫಲಿತಾಂಶಗಳು
ವಿಭಾಗ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ವಾಲಿಬಾಲ್ ನಲ್ಲಿ ೧೭ ವಯೋಮಿತಿ ಬಾಲಕರು ಕೌಡಿ ಮಹಾಂತೇಶ್ವರ ಹೆಚ್. ಬೊಚಿಗೊಂಡನಹಳ್ಳಿ (ವಿಜಯನಗರ ಪ್ರಥಮ್ ಸ್ಥಾನ ) .ಕೊಪ್ಪಳ ಜಿಲ್ಲಾ ತಂಡ ದ್ವಿತೀಯ ಸ್ಥಾನ.
೧೭ ವಯೋಮಿತಿ ಬಾಲಕಿಯರು ಜಿ.ಎಚ್. ಬನ್ನಿಕಟ್ಟಿ (ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನ). ಜಿ.ಎಚ್.ಎಸ್.ಎಸ್. ಕೆ.ಜಿ. ಹಡಗಲಿ (ವಿಜಯನಗರ ದ್ವಿತೀಯ ಸ್ಥಾನ),
೧೪ ವಯೋಮಿತಿ ಬಾಲಕರು ಜಿ.ಎಚ್.ಎಸ್. ಕೊಟಗೆರ (ಯಾದಗಿರಿ ಜಿಲ್ಲೆ ಪ್ರಥಮ ಸ್ಥಾನ), ದ್ವಿತಿಯ ಸ್ಥಾನ ಬಳ್ಳಾರಿ. ೧೪ ವಯೋಮಿತಿ ಬಾಲಕಿಯರು ಜಿ.ಎಚ್.ಎಸ್ ಕೋಟಗೇರ ಯಾದಗಿರಿ ಜಿಲ್ಲೆ ಪ್ರಥಮಸ್ಥಾನ. ದ್ವಿತೀಯ ಸ್ಥಾನ ವಿಜಯ ನಗರ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರುಮಠಕಲ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುರುಷೋತ್ತಮ ಜೋಶಿ ಅವರು ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಆಟದಲ್ಲಿ ಬಹಳಷ್ಟು ರುಚಿ ಇದೆ, ಅದನ್ನು ಅವರು ಸೋಲು, ಗೆಲುವು ಎನ್ನದೆ ಎಲ್ಲರೂ ಮುಂದುವರೆಸಿ ಕೊಂಡು ಹೊಗಬೇಕು ಅಂದಾಗ ಮಾತ್ರ ಇಂತಹ ಉತ್ತಮ ಆಟಗಳು ನಾವು ಕಾಣಬಹುದು ಎನ್ನುತ್ತ ಜೇಡರ ಬಲೆ ಎನ್ನುವ ಕಥೆ ಹೇಳಿದರು. ಪಿ ಎಸ್ ಐ ಶಹಾಬಾದಿ ಅವರು ತಮ್ಮ ಜೀವನದಲ್ಲಿ ಕ್ರೀಡೆಗಳಿಂದ ಆಗಿರುವ ಸತ್ಯ ಘಟನೆಗಳು ವೇದಿಕೆಯ ಮೇಲೆ ಹಂಚಿಕೊAಡರು. ಅನಿಲ್ ಕುಮಾರ್, ಅಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಸಂಯೋಜಕರು ಲಕ್ಷ್ಮೀಕಾಂತ್ ರೆಡ್ಡಿ,ಸರಕಾರಿ ನೌಕರರ ಸಂಘ ಅಧ್ಯಕ್ಷ ಗುರುಮಠಕಲ್ ಸಂತೋಷ ಕುಮಾರ್ ನಿರೇಟಿ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಗುರುಮಠಕಲ್ ನಾರಾಯಣ ರೆಡ್ಡಿ ಪೋ. ಪಾಟೀಲ್, ಹಣಮಂತರಾವ್, ಬುಡ್ಡಪ್ಪ ಜನಾರ್ಧನ, ಬಾಲಪ್ಪ ಸಿರಿಗೇಂ, ಹಾಗೂ ದೈಹಿಕ ಶಿಕ್ಷಕ ಶರಣಪ್ಪ ಪಾಟೀಲ್, ಭೀಮರಾಯ, ಸೇರಿದಂತೆ ಇಲಾಖೆಯ ಹಲವು ಸಿಬ್ಬಂದಿ ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿ ವಿಜೇತ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.