ಸಂಜೆ ವಾಣಿ ವಾರ್ತೆ |
ಜಮಖಂಡಿ:ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಿ.ಟಿ.ಈ. ಕಾಲೇಜಿನ ಗುರು-ಗೆಳೆಯರ ಷಷ್ಠ್ಯಬ್ದಿ ಸಂಭ್ರಮ-೨೦೨೬ ಹಾಗೂ ವಜ್ರಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ನಗರದ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದಷ್ಟೇ ಅಲ್ಲದೆ, ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಓದುವ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಸಿದ್ದು ಹುಲ್ಲೊಳ್ಳಿ ಅವರು, ಗುರು-ಶಿಷ್ಯರ ಬಾಂಧವ್ಯ ಮತ್ತು ಹಳೆಯ ವಿದ್ಯಾರ್ಥಿಗಳ ಒಗ್ಗಟ್ಟನ್ನು ಶ್ಲಾಘಿಸಿದರು.
ವಾದ್ಯಮೇಳದೊಂದಿಗೆ ಗುರುಗಳಿಗೆ ಅದ್ಧೂರಿ ಸ್ವಾಗತವಜ್ರಮಹೋತ್ಸವದ ಅಂಗವಾಗಿ ತಮಗೆ ಶಿಕ್ಷಣ ನೀಡಿದ ಗುರುಗಳನ್ನು ತೆರೆದ ತೇರು ವಾಹನದಲ್ಲಿ ಕೂರಿಸಿ, ವಿವಿಧ ವಾದ್ಯಮೇಳಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸುವ ಮೂಲಕ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕಿಯರು ಸಂಭ್ರಮದಿAದ ಕುಣಿದು ಕುಪ್ಪಳಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗುರು-ಶಿಷ್ಯರ ಆತ್ಮೀಯ ಬಾಂಧವ್ಯ ಹಾಗೂ ಹಳೆಯ ವಿದ್ಯಾರ್ಥಿಗಳ ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸಿ, ಕಾಲೇಜು ಹಾಗೂ ಹಾಸ್ಟೆಲ್ ಜೀವನದ ಸಿಹಿ ನೆನಪುಗಳನ್ನು ಹಂಚಿಕೊAಡರು.ಬಾಲಕರ ವಸತಿ ನಿಲಯದ ಜೀರ್ಣೋದ್ಧಾರಕ್ಕೆ ೫೦ ಲಕ್ಷ ನೆರವುಬಾಲಕರ ವಸತಿ ನಿಲಯದ ಜೀರ್ಣೋದ್ಧಾರಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ೫ ಲಕ್ಷ ಅನುದಾನ ನೀಡಿದ್ದು, ಸಂಸದ ಹನುಮಂತ ನಿರಾಣಿ ಅವರು ೫ ಲಕ್ಷ ನೆರವು ನೀಡಿದ್ದಾರೆ. ಉಳಿದ ಹಳೆಯ ವಿದ್ಯಾರ್ಥಿಗಳು ಒಟ್ಟು ೪೦ ಲಕ್ಷ ಕೊಡುಗೆ ನೀಡಿದ್ದು, ಒಟ್ಟಾರೆ ೫೦ ಲಕ್ಷ ವೆಚ್ಚದಲ್ಲಿ ವಸತಿ ನಿಲಯವನ್ನು ನವೀಕರಿಸಲಾಗಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮವನ್ನು ಚೇತನಾ ಮಾಳಷೇಟ್ಟಿ ನಿರೂಪಿಸಿದರು. ಬಸವರಾಜ ಆಲಗೂರ ಸ್ವಾಗತಿಸಿದರು.ಸಿ.ಟಿ.ಈ. ಕಾಲೇಜಿನ ವಜ್ರಮಹೋತ್ಸವವು ಗುರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಹಳೆಯ ವಿದ್ಯಾರ್ಥಿಗಳ ಸ್ನೇಹ, ಒಗ್ಗಟ್ಟು ಹಾಗೂ ಗುರು-ಶಿಷ್ಯರ ಆತ್ಮೀಯ ಸಂಬAಧವನ್ನು ಸಾರುವ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂದಿತು




















