
ಮಾಲೂರು,ಅ.೮:೨೦೨೬-೨೭ನೇ ಸಾಲಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯಕ್ಕೆ ಸುಮಾರು ಶೇ. ೮೦ರಷ್ಟು ಕಾರ್ಯ ಮುಗಿದಿದೆ. ಶೇಕಡಾ ೨೦ರಷ್ಟು ತಾಕುಗಳಲ್ಲಿ ಮಾತ್ರ ಸಮೀಕ್ಷೆ ಮುಂದುವರಿಯಬೇಕಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ. ಚಂದ್ರಪ್ಪ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರು ತಮ್ಮ ಬೆಳೆಗಳನ್ನು ಸಮೀಕ್ಷೆ ಮೂಲಕ ಖಾತರಿಪಡಿಸಿಕೊಳ್ಳಿ. ೨೦೨೬-೨೭ನೇ ಸಾಲಿನಲ್ಲಿ ಸಮೀಕ್ಷೆಯ ಆಧಾರಿತ ದತ್ತಾಂಶವನ್ನು ಸರ್ಕಾರ ಸುಲಭವಾಗಿ ವಿವಿಧ ಸೌಲಭ್ಯಗಳಿಗೆ ಬಳಸುತ್ತಿದೆ. ಎಲ್ಲ ರೈತರು ತಮ್ಮ ತಾಕುಗಳನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಎಂ ಎಲ್ ಆರ್ ಫೋಟೋ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ. ಚಂದ್ರಪ್ಪ.

























