Home ಜಿಲ್ಲೆ ಕಲಬುರಗಿ ಕೇಬಲ್ ಕಳ್ಳತನ ಪ್ರಕರಣ ಭೇದಿಸಿ 36 ರೈತರಿಗೆ ನೆರವು: ಲಖನ್ ಮಸಗುಪ್ಪಿ

ಕೇಬಲ್ ಕಳ್ಳತನ ಪ್ರಕರಣ ಭೇದಿಸಿ 36 ರೈತರಿಗೆ ನೆರವು: ಲಖನ್ ಮಸಗುಪ್ಪಿ

ಅಫಜಲಪುರ: ಬರಗಾಲದ ಸಂಕಷ್ಟದಲ್ಲಿ ಬೆಳೆ ಉಳಿಸಿಕೊಳ್ಳಲು ಹೋರಾಡುತ್ತಿರುವ ರೈತರಿಗೆ ಪಂಪ್‍ಸೆಟ್‍ಗಳ ಮೋಟರ್ ಕೇಬಲ್ ಕಳ್ಳತನವಾಗುವುದು ಮತ್ತಷ್ಟು ಆರ್ಥಿಕ ಹೊರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸಿ 36 ರೈತರಿಗೆ ಕೇಬಲ್ ಮರಳಿಸುವ ಮೂಲಕ ನಮ್ಮ ಸಿಬ್ಬಂದಿ ರೈತರಿಗೆ ನೆರವಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಿಪಿಐ ಲಖನ್ ಮಸಗುಪ್ಪಿ ಹೇಳಿದರು.
ಅಫಜಲಪುರ ತಾಲೂಕಿನ ದೇವಲ ಗಾಣಗಾಪೂರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗುನ್ನೆ ನಂ. 93/26ರ ಪ್ರಕರಣದ ತನಿಖೆ ಕೈಗೊಂಡ ಪೆÇಲೀಸರು, ಮೂವರು ಆರೋಪಿತರನ್ನು ಪತ್ತೆಹಚ್ಚಿ ಅವರಿಂದ ಕಳವು ಮಾಡಿದ್ದ ಕೇಬಲ್‍ಗಳನ್ನು ವಶಪಡಿಸಿಕೊಂಡು ರೈತರಿಗೆ ಮರಳಿಸಿದ್ದಾರೆ ಎಂದು ಅವರು ತಿಳಿಸಿದರು.
ಪಿಎಸ್‍ಐ ಕು. ಸಂಗೀತಾ ಸಿಂಧೆ ಮಾತನಾಡಿ, ತೆಲ್ಲೂರ, ಘೂಳನೂರ, ಸಿರಸಗಿ, ಬಂದರವಾಡ, ಸಾಗನೂರ, ಚಿಣಮಗೇರಾ, ಹೂವಿನಹಳ್ಳಿ, ದೇವಲ ಗಾಣಗಾಪೂರ, ಹಾವನೂರ ಹಾಗೂ ಗೊಬ್ಬೂರ (ಬಿ) ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿನ ಪಂಪ್‍ಸೆಟ್‍ಗಳ ಕೇಬಲ್ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿ ತಂಡದೊಂದಿಗೆ ತನಿಖೆ ನಡೆಸಿದಾಗ ಮೂವರು ಆರೋಪಿತರು ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಅವರು ಇತರ ರೈತರ ಕೇಬಲ್‍ಗಳನ್ನೂ ಕದ್ದಿರುವುದಾಗಿ ಒಪ್ಪಿಕೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ ಕಳ್ಳತನದ ಬಗ್ಗೆ ಮಾಹಿತಿ ನೀಡಿದ ರೈತರ ವಿವರಗಳನ್ನು ಪರಿಶೀಲಿಸಿ, ಅವರಿಗೆ ಸೇರಿದ ಕೇಬಲ್‍ಗಳನ್ನು ಮರಳಿಸಲಾಗಿದೆ ಎಂದರು.
ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣವರ್, ಡಿವೈಎಸ್‍ಪಿ ತಮ್ಮರಾಯ ಪಾಟೀಲ್ ಹಾಗೂ ಸಿಪಿಐ ಲಖನ್ ಮಸಗುಪ್ಪಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ಕು. ಸಂಗೀತಾ ಸಿಂಧೆ ಮತ್ತು ಶ್ರೀದೇವಿ ಕಟ್ಟಿ ಕಾರ್ಯಾಚರಣೆ ನಡೆಸಿದರು. ಸಿಬ್ಬಂದಿಗಳಾದ ಶಿವಯ್ಯ, ಆನಂದ, ಯಲ್ಲಪ್ಪ, ಮಕ್ತುಂ ಪಟೇಲ್, ಅಣ್ಣಪ್ಪ, ವಿಠ್ಠಲ್, ಚಂದ್ರಶಾ, ಸಂಗಣ್ಣ, ಬಲರಾಮ, ಸಂತೋಷ, ಕಾಶಿನಾಥ ಹಾಗೂ ಭಾಗಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೆÇಲೀಸರ ಕಾರ್ಯಕ್ಕೆ ರೈತರ ಮೆಚ್ಚುಗೆ: ಹೊಲದಲ್ಲಿನ ಕೇಬಲ್ ಕಳ್ಳತನದಿಂದ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುವುದರ ಜೊತೆಗೆ ಹೊಸ ಕೇಬಲ್ ಖರೀದಿಸುವ ಹೆಚ್ಚುವರಿ ವೆಚ್ಚವೂ ರೈತರ ಮೇಲೆ ಬೀಳುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪೆÇಲೀಸರು ಕಳವು ಮಾಡಿದ ಕೇಬಲ್‍ಗಳನ್ನು ಪತ್ತೆಹಚ್ಚಿ ಮರಳಿಸಿರುವುದು ನಮಗೆ ದೊಡ್ಡ ನೆರವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು. ಪೆÇಲೀಸ್ ಇಲಾಖೆಯ ತ್ವರಿತ ಸ್ಪಂದನೆ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ರೈತರಿಗೆ ನ್ಯಾಯ ದೊರೆತಿದ್ದು, ಪೆÇಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.