Home ಜಿಲ್ಲೆ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ

ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ

ಲಕ್ಷೆö್ಮÃಶ್ವರ,ನ೨೩: ಮನುಷ್ಯ ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೂ,.. ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವಂತಾಗಬೇಕು ಎಂದು ಶಿರಹಟ್ಟಿಯ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.

ಅವರು ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರ ರಾಣಿ ಚನ್ನಮ್ಮನ ವಿಜಯೋತ್ಸವ/ಜಯಂತೋತ್ಸವ ತಾಲೂಕು ಮಟ್ಟದ ಜಾಗೃತ ಸಮಾವೇಶದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಪಂಚಮಸಾಲಿ ಸಮಾಜದ ಶ್ರೇಯೋಭೀವೃದ್ದಿಗಾಗಿ ಕಳೆದ ಹತ್ತಾರು ದಶಕಗಳಿಂದ ಸೇವೆ ಸಲ್ಲಿಸಿದ ಅರಟಾಳ ರುದ್ರಗೌಡರು, ಕಂಬಿಳಿ ಸಿದ್ದಪ್ಪನಂತಹ ಅನೇಕ ಮಹನೀಯರ ಬಗ್ಗೆ ತಿಳಿದು ಸ್ಮರಿಸುವುದು ಮುಖ್ಯವಾಗುತ್ತದೆ. ಅಖಿಲ ಭಾರತ ವೀರಶೈವ ಮಹಾಸಭಾದ ನೇತೃತ್ವವಹಿಸಿಕೊಂಡು ಎಲ್ಲ ಸಮಾಜದ ನಾಯಕರನ್ನು, ಎಲ್ಲ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಕಟ್ಟುವ ಕೆಲಸ ಮಾಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ಒಂದು ನಾವೆಲ್ಲ ಬಂಧು ಎಂಬ ಭಾವನೆಯೊಂದಿಗೆ ಸಮಾಜ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಯಾವುದೇ ಸಮಾಜ ನಿರುದ್ಯೋಗದಿಂದ ಉದ್ಧಾರವಾಗದು ಈ ನಿಟ್ಟಿನಲ್ಲಿ ಸಮಾಜದ ವಿದ್ಯಾವಂತ ನಿರುದ್ಯೋಗಿಳನ್ನು ಉದ್ಯೋಗಶೀಲರನ್ನಾಗಿಸಬೇಕು.. ಅನ್ನದಾತರ ಬದುಕು ಸಂಕ?À್ಟದಲ್ಲಿದೆ.. ಸಮಾಜದ ಯುವಕರನ್ನು ದುಶ್ಚಟದಿಂದ ಹೊರ ತರುವ ಪ್ರಯತ್ನ ಸಮಾಜದ್ದಾಗಲಿ.. ಕೃಷಿ ಸೇರಿ ಎಲ್ಲ ರಂಗದಲ್ಲಿ ಸಮಾಜ ಬಾಂಧವರು ತೊಡಗಿಸಿಕೊಳ್ಳಬೇಕು. ಸಮಾಜದ ಶ್ರೇಯೋಭೀವೃದ್ದಿ, ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಸಿ ಪಾಟೀಲ ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ವೀರರಾಣಿ ಕಿತ್ತೂರ ಚನ್ನಮ್ಮಳ ಸ್ವಾಭಿಮಾನ, ಸಂಘಟನೆ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆಗಳೆಂಬ ಉದಾತ್ತ ಚಿಂತನೆಗಳನ್ನು ಹೊಂದಿದೆ. ಸ್ವಧರ್ಮ ನಿ?ೆ್ಠ ಪರಧರ್ಮ ಸಹಿ?ÀÄ್ಣತೆಯೊಂದಿಗೆ ಬದುಕುವುದು ಸಮಾಜದ ಧ್ಯೇಯವಾಗಬೇಕು. ನಮ್ಮೊಳಗಿನ ಬೇದಭಾವ ಮರೆತು ಪರಸ್ಫರ ಅನ್ಯೋನ್ಯತೆ ಹಾಗೂ ಇತರೇ ಸಮಾಜದವರೊಂದಿಗೆ ಉತ್ತಮ ಬಾಂಧವ್ಯದಿAದ ಬೆರೆತು ಮಾದರಿಯಾಗಿ ಬದುಕೋಣ. ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಪAಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಮತ್ತು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹೂವಿನಶಿಗ್ಲಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಾಸಕ ಡಾ.ಚಂದ್ರು ಲಮಾಣಿ, ವಿಪ ಸದಸ್ಯ ಪ್ರೋ.ಎಸ್.ವಿ ಸಂಕನೂರ ಮಾಜಿ ಶಾಸಕರಾದ ಜಿ.ಎಂ ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿದರು. ಶಿರಹಟ್ಟಿ ತಾಲೂಕ ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ತುಳಿ, ವಿಜಯಕುಮಾರ ಗಡ್ಡಿ, ಚಂಬಣ್ಣ ಬಾಳಿಕಾಯಿ, ಅಯ್ಯಪ್ಪ ಅಂಗಡಿ, ಶಾರಕ್ಕ ಮಹಾಂತಶೆಟ್ಟರ, ಬಸಮ್ಮ ಬೆಲಹುಣಸಿ, ಲೋಹಿತ ನೆಲವಿಗಿ, ಸಣ್ಣಿರಪ್ಪ ಹಳ್ಳೆಪ್ಪನವರ, ವೀರಭದ್ರಯ್ಯ ಹಿರೇಮಠ, ಜಮೀರ ಸೂರಣಗಿ, ಶೇಖಣ್ಣ ಕಾಳೆ, ಶಿವಣ್ಣ ಲಮಾಣಿ, ಪಿ.ಬಿ ಕರಾಟೆ, ನಿಂಗಪ್ಪ ಬನ್ನಿ, ಈಶ್ವರ ಗದಗ, ಈರಣ್ಣ ಬಡಿಗೇರ, ಬಸವರಾಜ ಬೆಟಗೇರಿ, ಕಿರಣ ನವಲೆ, ನಾರಾಯಣಸಾ ಪವಾರ,, ತಿಮ್ಮರಡ್ಡಿ ಮರಡ್ಡಿ, ಗುಡ್ಡಪ್ಪ ಹಡಪದ, ಬಸವರಾಜ ಓದುನವರ ಸೇರಿ ವಿವಿಧ ಸಮಾಜದ ಅಧ್ಯಕ್ಷರು, ಹಿರಿಯರು ಉಪಸ್ಥಿತರಿದ್ದರು.