
ಚನ್ನಮ್ಮನ ಕಿತ್ತೂರು, ನ೨೪: ವಿಬಿ ಜಿ ರಾಮ್ ಜಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಗ್ರಾಮಸ್ಥರು ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳ ಬೇಡಿಕೆ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕೆಂದು ಅಭಿವೃದ್ದಿ ಅಧಿಕಾರಿ ಜಯರಾಮ ಕಾದ್ರೊಳ್ಳಿ ಹೇಳಿದರು.
ತಾಲೂಕಿನ ದಾಸ್ತಿಕೊಪ್ಪ ಗ್ರಾಪಂದಲ್ಲಿ ನಡೆದ ೨೦೨೭-೨೮ನೇ ಸಾಲಿನ ವಿಬಿ ಜಿ ರಾಮ್ ಜಿ ಯೋಜನೆಯಡಿ ವಿಕಸಿತ ಗ್ರಾಪಂ ಕ್ರಿಯಾ ಯೋಜನೆ ರೂಪಿಸುವ ಉದ್ದೇಶದಿಂದ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
ಗ್ರಾಮಸಭೆಯಲ್ಲಿ ಗ್ರಾಮಸ್ಥರು ಹಾಗೂ ಕೂಲಿಕಾರರು ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳ ಬೇಡಿಕೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಕರೆ ನೀಡಿದರು. ಯೋಜನೆಯಡಿ ಒಟ್ಟು ೩೭೫ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ದನ, ಕುರಿ, ಕೋಳಿ ಶೆಡ್, ವಸತಿ ಮನೆಗಳಿಗೆ ೯೦ ಮಾನವ ದಿನಗಳ ಕೂಲಿ, ಕೃಷಿ ಹೊಂಡ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸುವಂತೆ ಬೇಡಿಕೆಗಳನ್ನು ಸಲ್ಲಿಸಿದರು.
ಐಇಸಿ ಸಂಯೋಜಕಿ ಎಸ್.ಬಿ. ಜವಳಿ ಅವರು ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಯೋಜನೆಯಡಿ ಪ್ರತಿ ದಿನಕ್ಕೆ ರೂ.೩೮೨ ಕೂಲಿ ಹಾಗೂ ಪ್ರತಿ ಅರ್ಹ ಕುಟುಂಬಕ್ಕೆ ವ?Àðದಲ್ಲಿ ೧೨೫ ಮಾನವ ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಅಲ್ಲದೆ, ವಯೋವೃದ್ಧರು, ವಿಶೇ?À ಚೇತನರು ಹಾಗೂ ಮಹಿಳೆಯರಿರುವ ಗುಂಪುಗಳಿಗೆ ಆದ್ಯತೆ ನೀಡಲಾಗುವುದೆಂದÀರು.
ಈ ಸಂದರ್ಭದಲ್ಲಿ ಸಿಆರ್ಪಿ ವಿನೋದ ಪಾಟೀಲ, ಕಾರ್ಯದರ್ಶಿ ಚಿದಾಂಬರ್ ಪಾಟೀಲ್, ತಾಂತ್ರಿಕ ಸಹಾಯಕ ಮನೋಜ್.ಎ, ಬಿಎಫ್ಟಿ ಬಸವರಾಜ ಹೊಸಮನಿ, ಡಿಇಒ ಈರಣ್ಣ ಸಿದ್ರಾಮನಿ, ಗ್ರಾಪಂ ಸಿಬ್ಬಂದಿ ಸೇರಿದಂತೆ ಕೂಲಿಕಾರ್ಮಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





















