
ಭಾಲ್ಕಿ: ಕೇಂದ್ರ ಸರ್ಕಾರದ ನೂತನ ವಿಬಿ ಜಿ ರಾಮ್ ಜಿ ಯೋಜನೆಯ ವರ್ಗ ಮೂರಲ್ಲಿರುವ ಗ್ರಾಮೀಣ ಜೀವನೋಪಾಯಕ್ಕೆ ಸಂಬAಧಿಸಿದ ವಿವಿಧ ಕಾಮಗಾರಿಗಳ ಬಗ್ಗೆ ತಾಲ್ಲೂಕಿನಲ್ಲಿರುವ ಮಹಿಳಾ ಸ್ವ-ಸಹಾಯ ಸಂಘದ ಮುಖ್ಯ ಪುಸ್ತಕ ಬರಹಗಾರ (ಎಂಬಿಕೆ)ರಿಗೆ ಮಾಹಿತಿ ನೀಡಿ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು.
ವಿಬಿಜಿ ರಾಮ್ಜಿ ಯೋಜನೆ ಕುರಿತಾಗಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನೆಯ ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕೂಡೆ ಅವರು, ‘ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಜಲ ಸಂರಕ್ಷಣೆ, ಗ್ರಾಮೀಣ ಮೂಲ ಸೌಕರ್ಯಗಳು, ಜೀವನೋಪಾಯ ಹಾಗೂ ಹವಾಮಾನ ವಿದ್ಯಾಮಾನಗಳನ್ನು ತಗ್ಗಿಸುವುದು ಸೇರಿ ಕಾಮಗಾರಿಗಳನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದ್ದು, ಜೀವನೋಪಾಯ ಕಾಮಗಾರಿಗಳಲ್ಲಿ ಮಹಿಳಾ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೂ ಹೆಚ್ಚು ಮಹತ್ವ ನೀಡಲಾಗಿದೆ’ ಎಂದರು.
‘ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಈ ವರ್ಗದಲ್ಲಿ ಸುಮಾರು ೮೦ಕ್ಕೂ ಹೆಚ್ಚು ಕಾಮಗಾರಿಗಳು ಇವೆ. ಜೀವನೋಪಾಯದ ಚಟುವಟಿಕೆಗಳಿಗಾಗಿ ತರಬೇತಿ ಕೇಂದ್ರಗಳ ನಿರ್ಮಾಣ, ಗ್ರಾಮೀಣ ಸಂತೆಕಟ್ಟೆಗಳ ನಿರ್ಮಾಣ, ಆಹಾರ ಧಾನ್ಯ ಸಂಗ್ರಹಣಾ ಘಟಕ, ಎಸ್ಎಚ್ ಜಿ ಶೆಡ್, ಶಿ ಮಾರ್ಟ್, ಎರೆಹುಳು ಗೊಬ್ಬರ ತಯಾರಿಕಾ ಘಟಕ, ಹಿಟ್ಟಿನ ಗಿರಣಿ, ಕೋಳಿ ಹಾಗೂ ಕುರಿ ಶೇಡ್ ಸೇರಿದಂತೆ ಇನ್ನು ಹಲವು ಕಾಮಗಾರಿಗಳನ್ನು ಮಹಿಳೆಯರು ಈ ಯೋಜನೆಯಡಿ ಪಡೆದುಕೊಳ್ಳಬಹುದು.
ಆಸಕ್ತ ಮಹಿಳೆಯರು ಸಂಬAಧಪಟ್ಟ ಗ್ರಾಮ ಪಂಚಾಯಿತಿಯ ಕ್ರೀಯಾ ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.
ಎನ್ಆರ್ಎಲ್ಎಂ ಯೋಜನೆ ಪ್ರಗತಿ ಪರಿಶೀಲನೆ ಸಭೆ:
ಇದೇ ವೇಳೆ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ವಿನೋದ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಎನ್ಆರ್ಎಲ್ಎಂ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಜರುಗಿತು.
ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಲ್ಎಂ)ದ ತಾಲ್ಲೂಕು ನಿರ್ವಹಣಾ ಘಟಕದ ಕಾರ್ಯಕ್ರಮ ವ್ಯವಸ್ಥಾಪಕಿ ಸಾಧನಾ ಗೌಡಗಾಂವೆ ಅವರು ವಿವಿಧ ಗ್ರಾಪಂಗಳಿAದ ಸಲ್ಲಿಕೆಯಾದ ಯೋಜನೆಯ ವರದಿಗಳನ್ನು ಸಲ್ಲಿಸಿದರು.
ಸಮುದಾಯ ಬಂಡವಾಳ ನಿಧಿ ವಿತರಣೆ, ಮಹಿಳಾ ಒಕ್ಕೂಟದ ದಾಖಲಾತಿ ನಿವರ್ಹಣೆ, ಕಟ್ ಬಾಕಿ, ಸಾಲ ಮರು ಪಾವತಿ, ಆಜೀವಿಕಾ, ಲೋಕೋಸ್, ಆಂತರಿಕ ಹಾಗೂ ಶಾಸನಬದ್ಧ ಲೆಕ್ಕ ಪರಿಶೋಧನೆ ಸೇರಿದಂತೆ ಎನ್ಆರ್ಎಲ್ಎಂ ಯೋಜನೆಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ವರದಿಗಳನ್ನು ಪರಿಶೀಲಿಸಿ ಪ್ರಗತಿ ಸಾಧಿಸುವಂತೆ ಸಭೆಗೆ ಆಗಮಿಸಿದ್ದ ಯೋಜನೆಯ ಮುಖ್ಯ ಪುಸ್ತಕ ಬರಹಗಾರರಿಗೆ ಸೂಚಿಸಿದರು.
ಬ್ಲಾಕ್ ವ್ಯವಸ್ಥಾಪಕಿಯರಾದ ಶ್ವೇತಾ, ಜಗಜ್ಯೋತಿ, ಅಭಿಯಾನದ ಕ್ಲಸ್ಟರ್ ಮೇಲ್ವಿಚಾರಕರಾದ ಪ್ರಭು, ಶ್ರೀಮಂತ, ಬಿಆರ್ ಪಿ-ಪಿಆರ್ ಐ ಪ್ರಿಯಾಂಕಾ ಸೇರಿದಂತೆ ಇತರರು ಇದ್ದರು.































