Home ಜಿಲ್ಲೆ ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಥಮಾದ್ಯತೆ : ಚನಶೆಟ್ಟಿ

ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಥಮಾದ್ಯತೆ : ಚನಶೆಟ್ಟಿ

ಭಾಲ್ಕಿ: ಪಟ್ಟಣದಲ್ಲಿ ಇದೇ ಆಗಷ್ಟ ೧೧ ರಂದು ನಡೆಸಲು ನಿರ್ಧರಿಸಿರುವ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರಿಗೇ ಪ್ರಥಮಾದ್ಯತೆ ಕೊಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಇದೇ ಆ.೧೧ ರಂದು ನಡೆಸಲು ನಿರ್ಧರಿಸಿರುವ ಕ.ಸಾ.ಪ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಘಾಟನೆ ಮತ್ತು ಸಮಾರೋಪ ಹೊರತು ಪಡೆಸಿ, ಎಲ್ಲಾ ಗೊಷ್ಠಿಗಳಲ್ಲಿಯೂ ವೇದಿಕೆಯ ಮೇಲೆ ಮಹಿಳೆಯರೇ ಇರುವಂತೆ ನೋಡಿಕೊಳ್ಳಲಾಗುವುದು. ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಥಮಾದ್ಯತೆ ನೀಡಲಾಗುವುದು. ಕಾರ್ಯಕ್ರಮದ ಸಮಿತಿಗಳಲ್ಲಿರುವ ಎಲ್ಲಾ ಸದಸ್ಯರು ತಮ್ಮ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಮ್ಮೇಳನದಲ್ಲಿ ಯಾವುದೇ ಲೋಪ ಬರದಂತೆ ಕನ್ನಡದ ಮನಸ್ಸುಗಳು ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಲಿಂ. ಡಾ| ಚನ್ನಬಸವ ಪಟ್ಟದ್ದೇವರ ಕ್ಷೇತ್ರವಾದ ಭಾಲ್ಕಿಯಲ್ಲಿ ಮಹಿಳಾ ಗೋಷ್ಠಿ ನಡೆಸಲು ನಿರ್ಧರಿಸಿರುವುದು ಸಂತಸದ ಸಂಗತಿ. ಡಾ| ಚನ್ನಬಸವ ಪಟ್ಟದ್ದೇವರು ಎಲ್ಲದರಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಮುಂದುವರೆಯುವ ನಿಟ್ಟಿನಲ್ಲಿ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ, ಮಹಿಳೆಯರಿಗಾಗಿಯೇ ಅಕ್ಕಮಹಾದೇವಿ ಪ್ರೌಢಶಾಲೆ, ಪ.ಪೂ ಕಾಲೇಜು, ಡಿಗ್ರೀ ಕಾಲೇಜು ಸ್ಥಾಪಿಸಿ, ಇಲ್ಲಿಯ ಮಹಿಳೆಯರು ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡಲು ಅನುವು ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು. ಕಸಾಪ ಜಿಲ್ಲಾ ಖಜಾಂಚಿ ಶಿವಶಂಕರ ಟೋಕರೆ ಮಾತನಾಡಿ, ಆ.೧೧ ರಂದು ಭಾಲ್ಕಿಯಲ್ಲಿ ನಡೆಯುವ ಜಿಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ, ಬೆಳಿಗ್ಗೆ ಧ್ವಜಾರೋಹಣ ದೊಂದಿಗೆ ಪ್ರಾರಂಭವಾಗುವು ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಸಾಪ ಪದಾಧಿಕಾರಿಗಳು ಶ್ರಮ ವಹಸಿಬೇಕು. ಇನ್ನು ಕೇಲವೇ ದಿನಗಳಲ್ಲಿ ಸಮ್ಮೇಳನ ಇರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಕಾರ್ಯದರ್ಶಿಗಳಾದ ರಮೇಶ ಚಿದ್ರಿ, ಮತ್ತು ಹಣಮಂತ ಕಾರಾಮುಂಗೆಯರು ವಿವಿಧ ಸಮಿತಿಗಳನ್ನು ರಚಿಸಿ, ಸಮ್ಮೇಳನದ ಯಶಸ್ವಿಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸೋಮನಾಥಪ್ಪ ಅಸ್ಟೂರೆ, ರೇಖಾಬಾಯಿ ಅಸ್ಟೂರೆ, ಚಂದ್ರಕಲಾ ಡಿಗ್ಗೆ, ಸುನಿತಾ ಮಮ್ಮಾ ಉಪಸ್ಥಿತರಿದ್ದರು.

ವಿವಿಧ ಸಮಿತಿಗಳ ವಿವರ:
ಧ್ವಜಾರೋಹಣ ಸಮಿತಿಯಲ್ಲಿ, ಐಜಿಕ್ ಬಂಗಾರೆ, ಸೋಮನಾಥ ಹೊಸಾಳೆ, ಜಿಪ್ಸನ್ ಕೋಟೆ. ಮೇರವಣಿಗೆ ಸಮಿತಿಯಲ್ಲಿ, ಹಣಮಂತ ಕಾರಾಮುಂಗೆ, ದೇವಿದಾಸ ಮೇತ್ರೆ, ಚಂದ್ರಕಾAತ ತಳವಾಡೆ, ಸುಜಾತಾ ಪಾಟೀಲ, ಮಲ್ಲಮ್ಮಾ ನಾಗನಕೆರೆ, ಸುನಿತಾ ಮಮ್ಮಾ, ಪೂರ್ಣೀಮಾ ಪಾಟೀಲ, ಸತ್ಯವಾನ ಕಾಂಬಳೆ, ಸಂತೋಷ ಬಿರಾದಾರ, ಅಶೋಕ ಬಾವುಗೆ. ಪ್ರಚಾರ ಸಮಿತಿಯಲ್ಲಿ, ಜೈರಾಜ ಪಾತ್ರೆ, ಜೈರಾಜ ದಾಬಶೆಟ್ಟೆ, ಸಂತೋಷ ಬಿಜಿಪಾಟೀಲ, ಗಣಪತಿ ಬೋಚರೆ, ಅಶೋಕ ರಾಜೋಳೆ, ಸುರೇಶ ಕನಶೆಟ್ಟಿ, ಬಸವರಾಜ ಪ್ರಭಾ. ವೇದಿಕೆ ಸಮಿತಿಯಲ್ಲಿ, ರಮೇಶ ಚಿದ್ರಿ, ದೀಪಕ ಥಮಕೆ, ಕುಪೇಂದ್ರ ಜಗಶೆಟ್ಟಿ, ಕೀರ್ತಿಲತಾ ಹೊಸಾಳೆ, ನಿರ್ಮಲಾ ಜಮಾದಾರ, ಅಂಜನಾ ಮಾಲಗಾರ, ವಿಜಯಲಕ್ಷಿö್ಮ ಹೊಸಾಳೆ, ಆರತಿ ಪಾತ್ರೆ, ಪಾರ್ವತಿ ಧುಮ್ಮನಸೂರೆ, ಕಾಶಿನಾಥ ಲದ್ದೆ, ಅಲಂಕಾರ ಸಮತಿಯಲ್ಲಿ ಜಿಪ್ಸನ್ ಕೋಟೆ, ಪರಮೇಶ್ವರ ಕರಡ್ಯಾಳೆ, ವಿಜಯ ಜಾಧವ, ಶಿವಕುಮಾರ, ಮಲ್ಲೇಶ್ವರ ಬಡಿಗೆರ, ಸಂತೋಷ ಪಾಟೀಲ, ಶಾಂತಾಬಾಯಿ ಬೇಲೂರೆ, ಸಾಂಸ್ಕೃತಿಕ ಸಮಿತಿ, ಅಕ್ಷಯ ಮುದ್ದಾ, ಶೈಲಜಾ ನಾರಾ, ಶಕುಂತಲಾ ಬಚ್ಚಣ್ಣ, ಪ್ರೇಮಲಾ ಸ್ವಾಮಿ, ಶ್ರೀದೇವಿ ಸ್ವಾಮಿ, ಆಶಾ ರಾಠೋಡ, ಸುರೇಖಾ ಲಿಂಬಾವೆ. ಪ್ರಸಾದ ಸಮಿತಿಯಲ್ಲಿ, ಶರಣಪ್ಪ ಬಿರಾದಾರ, ಬಸವರಾಜ ತೇಗಂಪೂರೆ, ಭಗವಾನ ವಲಂಡೆ, ಸಂದೀಪ ಉಮಾಜಿ, ಬಸವರಾಜ ಮಡಿವಾಳ. ಮಹಿಳಾ ಸಮಿತಿಯಲ್ಲಿ ಶುಭಾಂಗಿ ಚನ್ನಬಸವಣ್ಣ ಬಳತೆ, ರೇಖಾ ಮಹಾಜನ, ಮಾಯಾದೇವಿ ಗೋಖಲೆ, ಪುಷ್ಪಾ ಗಂದಗೆ, ಸರಸ್ವತಿ ಹುಲಸೂರೆ, ಗೀತಾ ಪಾಟೀಲ. ಅತಿಥಿಗಳ ವ್ಯವಸ್ಥಾ ಸಮಿತಿ, ಮಲ್ಲಿಕಾರ್ಜುನ ಹಲಮಂಡಗೆ, ಸುಭಾಷ ಹುಲಸೂರೆ, ತಿಪ್ಪಣ್ಣ ಶಿವಪೂರೆ, ಬಸವರಾಜ ರಂಜೇರೆ, ಗುಂಡಪ್ಪ ಸಂಗಮಕರ, ಶಂಭುಲಿAಗ ಕಾಮಣ್ಣ, ಶಿವಾನಂದ ಗುಂದಗೆ, ಮಹೇಶ ರಾಚೋಟೆ, ಸುನಿತಾ ಮಮ್ಮಾ, ಚಂದ್ರಕಲಾ ಡಿಗ್ಗೆ. ಆಹ್ವಾನ ಪತ್ರಿಕೆ ವಿತರಣಾ ಸಮಿತಿ, ಮಲ್ಲಿಕಾರ್ಜುನ ಪಾಟೀಲ ಧನ್ನೂರ(ಹೆಚ್), ಐಜಿಕ ಬಂಗಾರೆ, ಚಂದ್ರಕಾAತ ತಳವಾಡೆ, ಯೋಗೇಶ ಹಿರೇಮಠ, ನೀಲಕಂಠ ತುರಣೆ, ಶಿವಕುಮಾರ ಸ್ವಾಮಿ.