
ಸುಳ್ಯ:ಸುಳ್ಯ ತಾಲೂಕು ಚೆಸ್ ಅಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿ ಭಾನುವಾರ ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕ ಪ್ರಭಾಕರ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ತಾಲೂಕು ಚೆಸ್ ಅಸೋಸಿಯೇಶನ್ ಅಧ್ಯಕ್ಷ ಶಾಂತಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ರಾಜಾರಾಮ್, ಆಗ್ರೋ ಸರ್ವಿಸಸ್ & ಸಪ್ಲೈಸ್‌ನ ಅಕೌಂಟೆಂಟ್ ಅನಂತ ಕೃಷ್ಣ ಭಾಗವಹಿಸಿದ್ದರು.
ಸಮಾರಂಭದಲ್ಲಿ ಚೆಸ್ ತರಬೇತಿ ನೀಡುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಮತ್ತು ಮಹೇಶ್ ಕೊಯಿಂಗಾಜೆ ಅವರನ್ನು ಗೌರವಿಸಲಾಯಿತು. ಸುಳ್ಯ ತಾಲೂಕು ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಹರಿಪ್ರಸಾದ್ ಕೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಪಂದ್ಯಾಟವು ೧೬ ವರ್ಷ, ೧೪ ವರ್ಷ, ೧೧ ವರ್ಷ ಮತ್ತು ೯ ವರ್ಷದೊಳಗಿನ ವಿಧ್ಯಾರ್ಥಿಗಳಿಗೆ ನಾಲ್ಕು ವಿಭಾಗದಲ್ಲಿ ಚೆಸ್ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಒಟ್ಟು ೧೫೫ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯ ಫಲಿತಾಂಶ :
೧೬ ವರ್ಷದೊಳಗಿನವರ ಪಂದ್ಯಾಟದಲ್ಲಿ ಅಮೋಘ ಮೂರ್ತಿ (ಪ್ರ), ಮಯೂರ. ಕೆ (ದ್ವಿ), ಶ್ರೀಶಾಂತ್ ಪಿ.ಬಿ. (ತೃ) ಸ್ಥಾನ ಪಡೆದರು. ೧೪ ವರ್ಷಗಳೊಳಗಿನವರ ಪಂದ್ಯಾಟದಲ್ಲಿ ರಘುವರ ಕೆ. (ಪ್ರ), ಧನ್ವಿತ್ ಕೆ.ಎಸ್. (ದ್ವಿ), ಅದ್ವೈತ್ ನಂದನ್ (ತೃ) ಬಹುಮಾನ ಪಡೆದರು. ೧೧ ವರ್ಷದೊಳಗಿನವರ ಪಂದ್ಯಾಟದಲ್ಲಿ ರೋಹಿತಾಶ್ವ (ಪ್ರ), ಅದ್ವಿಕ್ ಮುದ್ದಪ್ಪ ಕೆ.ಎಸ್. (ದ್ವಿ), ಸಮನ್ವಿ ಶಂಕರ (ತೃ) ಸ್ಥಾನ ಪಡೆದರು. ೯ ವರ್ಷಗಳೊಳಗಿನವರ ಪಂದ್ಯಾಟದಲ್ಲಿ ಸನುದೀಪ್ತಿ ಎಂ.ಕೆ. (ಪ್ರ), ಹೃಶಾಂಕ್ ಡಿ.ಆರ್. (ದ್ವಿ), ಹಯನ್ ಸಿ.ಟಿ.(ತೃ) ಬಹುಮಾನ ಪಡೆದರು.


































