Home ಜಿಲ್ಲೆ ಕಲಬುರಗಿ ಆಳಂದ ಮತಕ್ಷೇತ್ರದಲ್ಲಿ 32,826 ಮತದಾರರ ಕಡಿತಮತದಾರರ ಪಟ್ಟಿ ಪರಿಶೀಲನೆಗೆ ಕಮಲಾಬಾಯಿ ಡಿ.ಕುಡಕಿ ಒತ್ತಾಯ

ಆಳಂದ ಮತಕ್ಷೇತ್ರದಲ್ಲಿ 32,826 ಮತದಾರರ ಕಡಿತಮತದಾರರ ಪಟ್ಟಿ ಪರಿಶೀಲನೆಗೆ ಕಮಲಾಬಾಯಿ ಡಿ.ಕುಡಕಿ ಒತ್ತಾಯ

ಕಲಬುರಗಿ: ಆಳಂದ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಕುರಿತು ಕಮಲಾಬಾಯಿ. ಡಿ.ಕುಡಕಿಯವರು ಆತಂಕ ವ್ಯಕ್ತಪಡಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಒಟ್ಟು 2,41,750 ಮತದಾರರಿದ್ದರು. ಆದರೆ, 2026ರ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು ಮತದಾರರ ಸಂಖ್ಯೆ 2,08,924ಕ್ಕೆ ಇಳಿದಿದೆ ಎಂದು ನೀಡಿರುವ ಅಂಕಿಅಂಶಗಳು ತಿಳಿಸುತ್ತವೆ.
ಈ ಎರಡು ಪಟ್ಟಿಗಳನ್ನು ಹೋಲಿಸಿದಾಗ ಒಟ್ಟು 32,826 ಮತದಾರರ ಇಳಿಕೆ ಕಂಡುಬಂದಿದೆ. ಇದರಲ್ಲಿ 16,469 ಪುರುಷ ಮತದಾರರು ಹಾಗೂ 16,357 ಮಹಿಳಾ ಮತದಾರರು ಕಡಿಮೆಯಾಗಿದ್ದಾರೆ. ಇತರೆ ಮತದಾರರ ಸಂಖ್ಯೆ 34ರಲ್ಲೇ ಉಳಿದಿದೆ.

ವಿಶೇಷ ಸಮಗ್ರ ಪರಿಷ್ಕರಣೆ (SIಖ) ನಂತರ ಮತದಾರರ ಸಂಖ್ಯೆಯಲ್ಲಿ ಕಂಡುಬಂದಿರುವ ಈ ಬದಲಾವಣೆಯ ಹಿನ್ನೆಲೆಯಲ್ಲಿ, ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಉಪಜೀವನಕ್ಕಾಗಿ ವಲಸೆ ಹೋಗಿ ಬೇರೆ ಬೇರೆ ನಗರಗಳಲ್ಲಿ ವಾಸವಿರುವ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ.ಏಕೆಂದರೆ ವಲಸೆ ಹೋಗಿರುವ ಜನರಿಗೆ ನಿಮ್ಮ ಜನ್ಮಸ್ಥಳದಲ್ಲಿರುವ ದಾಖಲಾತಿಗಳು ಸಲ್ಲಿಸಲು ಅಲ್ಲಿನ ಅಧಿಕಾರಿಗಳು ಸೂಚಿಸಿರುವ ಕಾರಣ ಆಳಂದ ತಾಲೂಕಿನ ಮತದಾರರು ಆತಂಕದಲ್ಲಿದ್ದಾರೆ.

ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯುವುದು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದೆ. ಆದ್ದರಿಂದ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಶೀಲನೆ ನಡೆಸಿ, ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ
ಮತ್ತು ಕೈ ಬಿಟ್ಟಿರುವ 32,826 ಮತದಾರರನ್ನು ಮತ್ತೆ ಮತದಾರರ ಪಟ್ಟಿಗೆ ಸೆರ್ಪಡೆಗೊಳಿಸಲು ಕ್ರಮ ಕೈಗೈಳ್ಳಬೇಕೆಂದು ಕಮಲಾಬಾಯಿ ದತ್ತಾತ್ತೇಯ ಕುಡಕಿಯವರು ಸರ್ಕಾರದ ಮುಖ್ಯ ಚುನಾವಣಾಧಿಕಾರಿಗೆ ಒತ್ತಾಯಿಸಿದ್ದಾರೆ.