Home Uncategorized ಸಂಪಾಜೆ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

ಸಂಪಾಜೆ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

ಸುಳ್ಯ:ಸಂಪಾಜೆ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಸಂಪಾಜೆ ಗ್ರಾಮದ ಬೈಲೆ-ಬಸಳೆ ರಸ್ತೆಗೆ ೧೦ ಲಕ್ಷ , ನೆಲ್ಲಿಕುಮೇರಿ- ಕೀಲಾರು ರಸ್ತೆಗೆ ೧೦ ಲಕ್ಷ, ಬಾಚಿಗದ್ದೆ-ಕೋಡಿ ಕೈಪಡ್ಕ ರಸ್ತೆಗೆ ೫.೫೦ ಲಕ್ಷ, ಕಲ್ಲುಗುಂಡಿ-ದಂಡೆಕಜೆ ರಸ್ತೆಗೆ ೧೦ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಈ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಸಂಪಾಜೆ -ಕಲ್ಲುಗುಂಡಿ ಗ್ರಾಮದ ಬಹು ಬೇಡಿಕೆಯ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿಗಳ ಕನಸು ನನಸಾಗಲಿದೆ. ಗ್ರಾಮಗಳ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗಳು ಅಭಿವೃದ್ಧಿ ಆದಷ್ಟು ಶೀಘ್ರವೇ ಪೂರ್ಣ ಗೊಳಿಸಲಿದ್ದೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ, ಕಾರ್ಯದರ್ಶಿ ಸತೀಶ್ ಶ್ ನಾಯ್ಕ್, ಹಿರಿಯರಾದ ಜಗದೀಶ್ ಕೆ. ಪಿ , ಗಣಪತಿ ಭಟ್ , ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ ಉಳುವಾರು, ಯಶೋಧ ಲೋಕನಾಥ್, ಸಂಪಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಪೇರಾಲು, ಪ್ರಕಾಶ್ ಕೆ. ಪಿ, ಪುನೀತ್ ದೊಡ್ಡಡ್ಕ, ರಾಘವ ಅಬೀರ, ಮನೋಜ್ ಜಿ.ಎಸ್ ಗೂನಡ್ಕ,ಶಾಜಿ ಮಾಧವನ್ , ಚಂದ್ರಶೇಖರ ಕೈಪಡ್ಕ, ನಾಗೇಶ್ ಕುಯಿಂತೋಡು , ಮಾಜಿ ಗ್ರಾ.ಪಂ ಸದಸ್ಯೆ ರಜನಿ ಶರತ್, ರಮ್ಯ ಕೆ.ಆರ್, ಚಂದ್ರಕಲಾ , ಸುನಿತಾ,ಲೋಕೇಶ್ ಬಾಚಿಗದ್ದೆ, ಅಭಿಷೇಕ್ ಕೈಪಡ್ಕ , ಮಿಥುನ್, ಸಚಿನ್ ಕೀಲಾರು, ಯಶವಂತ ಮತ್ತಿತರರು ಉಪಸ್ತಿತರಿದ್ದರು.