ಕಲಬುರಗಿ: ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನುಸಾರ ಕಬ್ಬಿನ ದರ ನಿಗದಿ ಪಡಿಸಬೇಕು, ಸಕ್ಕರೆ ದರ (ಎಂಎಸ್‍ಪಿ) ಒಂದು ಕೆಜಿಗೆ 60 ರೂ., ಒಂದು ಟನ್ ಕಬ್ಬಿಗೆ 5,500 ರೂ.ದರ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಗರದ ರಾಮ ಮಂದಿರ ಬಳಿ ಇಂದು ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಸವರಾಜ ಕೋರಿ, ಜಿಲ್ಲಾ ಅಧ್ಯಕ್ಷ ಗುಳ್ಲಪ್ಪಗೌಡ ಪಾಟೀಲ, ಜಿಲ್ಲಾ ಸಂಚಾಲಕ ಶರಣು ಪಾಟೀಲ, ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.