
ಕಲಬುರಗಿ,ಅ.14: ಕಲಬುರಗಿ ನಗರದಲ್ಲಿ ಯೂರಿಯಾ ರಸಗೋಬ್ಬರ ಅಕ್ರಮವಾಗಿ ಸಂಗ್ರಹಿಸಿ ಬೇರೆ ರಾಜ್ಯಗಳಿಗೆ ಕೆಮಿಕಲ್ ತಯಾರಿಕೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದಾರೆನ್ನುವಂತಹ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದ್ದು ಖಂಡನೀಯ.ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರನ್ನು ಅಮಾನತ್ ಮಾಡಿ ಸಿಬಿಐ ತನಿಖೆ ನಡೆಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು
ಶ್ರೀ ರಾಮ ಸೇನೆ ಸಂಘಟನೆಯವರು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಯೂರಿಯಾ ಗೋದಾಮನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ತಿಳಿಸಿದಾಗ ಕೃಷಿ ಅಧಿಕಾರಿಗಳು ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಂಟಿ ದಾಳಿ ನಡೆಸಿ ಟನ್ನ ಗಟ್ಟೆಲೆ ಸಂಗ್ರಹಿಸಿಟ್ಟಿದ್ದ ಯೂರಿಯಾವನ್ನು ವಶಪಡಿಸಿಕೊಂಡು ಎಫ್ಐ ಆರ್ ದಾಖಲಾಗಿ ಹಲವಾರು ತಿಂಗಳುಗಳೇ ಕಳೆದಿದ್ದರೂ ಕ್ರಮ ಆಗದಿರೋದು ನೋಡಿದರೆ ಕೃಷಿ ಅಧಿಕಾರಿಗಳ ಕೈವಾಡವಿರುವದು ಕಾಣುತ್ತದೆ ಎಂದು ಆರೋಪಿಸಿದರು.
ಅನ್ನದಾತನಿಗೆ ಸಿಗಬೇಕಿದ್ದ ರಿಯಾಯಿತಿ ರಸಗೊಬ್ಬರ ಅನ್ನದಾತರಿಗೆ ಸಿಗದೆ ಕಾಳ ದಂಧೆ ಮಾಡುವವರಿಗೆ ಸಿಗುತ್ತದೆ ಅಂದರೆ ಅಧಿಕಾರಿಗಳ ಪಾತ್ರವಿರದೆ ಸಾಧ್ಯವಿಲ್ಲ. ತನಿಖೆಯ ಮೂಲಕ ಎಲ್ಲವೂ ಬಯಲಾಗಬೇಕು .ಮುಧೋಳದಲ್ಲಿಯೂ ಇಂತಹದೇ ಪ್ರಕರಣ ದಾಖಲಾಗಿದೆ.ಅಕ್ಕೋಬರ್ 29 ರೊಳಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸುತ್ತೇವೆ.ಅಲ್ಲದೆ ಜನಪ್ರತಿನಿದಿಗಳ ಕಛೇರಿ ಮನೆ ಮುತ್ತಿಗೆಯನ್ನು ಹಾಕುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ,ರಾಮಸೇನೆ ಜಿಲ್ಲಾಧ್ಯಕ್ಷ ಮಹೇಶ ಕೆಂಭಾವಿ ಸೇರಿದಂತೆ ಹಲವರಿದ್ದರು.
























