Home Uncategorized ಪದಾಧಿಕಾರಿಗಳ ಆಯ್ಕೆ

ಪದಾಧಿಕಾರಿಗಳ ಆಯ್ಕೆ


ಲಕ್ಷೆö್ಮÃಶ್ವರ,ಅ.೧೦: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ವಕ್ತಾರ ಸೋಮಣ್ಣ ಡಾಣಗಲ್ ಮತ್ತು ಮಾಜಿ ಶಾಸಕರು , ಪಂಚಮಸಾಲಿ ಸಮಾಜದ ಹಿರಿಯರಾದ ಜಿ.ಎಂ ಮಹಾಂತಶೆಟ್ಟರ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಶ್ರೀ ಲಿಂ.ವೀರಗAಗಾಧರ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಸಮಾಜದ ಮುಖಂಡರನ್ನೊಳಗೊAಡು ನಡೆದ ಸಭೆಯಲ್ಲಿ ಲಕ್ಷೆö್ಮÃಶ್ವರ ತಾಲೂಕಿನ ಪಂಚಮಸಾಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಚನ್ನಮ್ಮನ ಜಯಂತೋತ್ಸವ ಆಚರಣೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷೆö್ಮÃಶ್ವರ ತಾಲೂಕಿನ ನೂತನ ಅಧ್ಯಕ್ಷರಾಗಿ ನಿವೃತ್ತ ಡಿವೈಎಸ್‌ಪಿ ಶಂಕರ ರಾಗಿ ಅವರನ್ನು ಸಭೆಯು ಒಮ್ಮತದ ನಿರ್ಣಯದೊಂದಿಗೆ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಮೇಶ ಮುಂದಿನಮನಿ, ಅಶೋಕ ಪಾಟೀಲ, ರುದ್ರಪ್ಪ ಉಮಚಗಿ, ದೇವೇಂದ್ರಪ್ಪ ತೋಟದ, ಕಾರ್ಯದರ್ಶಿಯಾಗಿ ಶಿವಾನಂದ ದೇಸಾಯಿ, ಸಹ ಕಾರ್ಯದರ್ಶಿಯಾಗಿ ರಮೇಶ ಹಾಳದೋಟದ, ಖಜಾಂಚಿಯಾಗಿ ಮಂಜುನಾಥ ಹೊಗೆಸೊಪ್ಪಿನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ಎಂ ಮಹಾಂತಶೆಟ್ಟರ ಸಮಾಜದ ಶ್ರೇಯೋಭಿವೃದ್ದಿ, ಸಂಘಟನೆಯ ದೃಷ್ಟಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ತಾಲೂಕಿನ ೧೧ ಹಿರಿಯರ ಸಲಹಾ ಸಮಿತಿಯ ಸಲಹೆ-ಮಾರ್ಗದರ್ಶನದೊಂದಿಗೆ ತಾಲೂಕು ಕಮೀಟಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಲಿದೆ. ನೂತನ ತಾಲೂಕಾ ಸಂಘದ ನೇತೃತ್ವದಲ್ಲಿ ನವಂಬರ ೨೧ ರಂದು ಲಕ್ಷೆö್ಮÃಶ್ವರದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತೋತ್ಸವ, ವಿಜಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಮಾಜದ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.
ನೂತನ ಅಧ್ಯಕ್ಷರಾದ ಶಂಕರ ರಾಗಿ ಮಾತನಾಡಿ, ಸಮಾಜದ ಸಂಘಟನೆ, ಶ್ರೇಯೋಭಿವೃದ್ದಿಗಾಗಿ ತನುಮನಧನ ಸೇವೆ ಮಾಡಲು ಸಿದ್ದನಿದ್ದೇನೆ. ಇದಕ್ಕೆ ಸಮಾಜ ಬಾಂಧವರು, ಹಿರಿಯರು, ಯುವಕರೆಲ್ಲರ ಸಹಾಯ-ಸಹಕಾರ ಕೋರುತ್ತೇನೆ ಎಂದರು.
ಈ ವೇಳೆ ಸಮಾಜದ ಹಿರಿಯರಾದ ಗದಿಗೆಪ್ಪ ಯತ್ನಳ್ಳಿ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜೆಕಣ್ಣವರ, ಚನ್ನಪ್ಪ ಜಗಲಿ, ವಿರೂಪಾಕ್ಷಪ್ಪ ಮೇಟಿ, ಡಿ.ವೈ ಹುನಗುಂದ, ಬಸವರಾಜ ತೋಟದ, ದೇವೇಂದ್ರಪ್ಪ ಮಾಗಿ, ಶಿವಜೋಗೆಪ್ಪ ಹಮ್ಮಗಿ, ಭರಮಪ್ಪ ಕೊಡ್ಲಿ, ಬಸವರಾಜ ತುಳಿ, ಮಾದೇವಗೌಡ ನರಸಮ್ಮನವರ, ತಿಪ್ಪಣ್ಣ ಕೊಂಚಿಗೇರಿ, ಶಿವನಗೌಡ ಕಂಠಿಗೌಡ್ರ, ಬಸವರಾಜ ಸಾಲಿ, ಶಾಂತಣ್ಣ ಬಳ್ಳಾರಿ, ಬಾಪೂಗೌಡ ಪಾಟೀಲ, ನಾಗರಾಜ ಪಾಟೀಲ, ಎಸ್.ಎಫ್ ಆದಿ, ಎಸ್.ಕೆ ಪೊಲೀಸ್‌ಪಾಟೀಲ, ಅಶೋಕಗೌಡ ಪಾಟೀಲ ಸೇರಿ ಸಮಾಜದ ಮುಖಂಡರು, ವಿವಿಧ ಗ್ರಾಮಗಳ ಹಿರಿಯರು, ಯುವಕರು ಪಾಲ್ಗೊಂಡಿದ್ದರು.