
ಕಲಬುರಗಿ,ಅ.14: ಪದವಿ ಪೂರ್ವ ಶಿಕ್ಷಣಇಲಾಖೆಯಿಂದ ಇತ್ತೀಚೆಗೆ ನಗರದ ಚಂದ್ರಶೇಖರ ಪಾಟಿಲ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಅಂತರಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಸ್ಪರ್ಧೆಯಲ್ಲಿ ಚದುರಂಗದಾಟದ ವಿಭಾಗದಲ್ಲಿ ನಡೆದ ತೀವ್ರ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಚಂದ್ರಕಾಂತ ಪಾಟೀಲ ಕಾಲೇಜಿನ ವಿದ್ಯಾರ್ಥಿಗಳು ಕಲಬುರಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ.
ಚದುರಂಗದಾಟ( ಚೆಸ್ ) ದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳಾದ ವಿಶಾಲ ಯಶ್ವಂತ ಕುಲಕರ್ಣಿ ಹಾಗೂ ಸೇವಂತಾ ದಿಲೀಪ ಆಡೆ ಅವರು ಪುರುಷ ಹಾಗು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯಿಂದರಾಜ್ಯ ಮಟ್ಟದ ಸ್ಪರ್ದೆಯಲ್ಲಿಆಯ್ಕೆಯಾಗಿದ್ದಾರೆ.ರಾಜ್ಯದರಾಜ್ಯಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವರಾಜ್ಯ ಮಟ್ಟದಚದುರಂಗದಾಟದಲ್ಲಿ ಕಲಬುರಗಿಜಿಲ್ಲೆಯಿಂದ ಪ್ರತಿನಿಧಿಸಲ್ಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯಅಧ್ಯಕ್ಷ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಡಾ. ಬಿ.ಜಿ. ಪಾಟೀಲ ಕಾಲೇಜಿನ ಪ್ರಾಚಾರ್ಯ ಸುರೇಶ ಹವಲ್ದಾರ ಅವರು ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.























