
ಕಲಬುರಗಿ: ಕಬ್ಬು ಬೆಳೆಗಾರರ ಹಲವು ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ರೈತ ಸಂಘಟನೆಯವರು ಇಂದು ನಗರದ ರಾಮಮಂದಿರ ವೃತ್ತ ಮತ್ತು ಹುಮನಾಬಾದ್ ರಿಂಗ್ ರಸ್ತೆಯ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ರಾಮಮಂದಿರ ವೃತ್ತದಲ್ಲಿ ಅಹೋರಾತ್ರಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಪಾಲ್ಗೊಂಡು ಬೆಂಬಲ ಸೂಚಿಸಿದರು.ರೈತ ಮುಖಂಡರಾದ ಜಗದೀಶ ಪಾಟೀಲ ರಾಜಾಪುರ ,ಗುರಪ್ಪ ಪಾಟೀಲ,ಸಿದ್ಧರಾಮ ಬೆಣ್ಣೂರ,ಶರಣಬಸಪ್ಪ ಮಮಶೆಟ್ಟಿ,ವೀರೇಶ ಚಿತ್ತಾಪುರ,ವೀರೇಶ ದೊಡ್ಡಮನಿ,ಮಲ್ಲಣಗೌಡ ಬಿರಾದಾರ,ಶಾಂತವೀರಪ್ಪ ಸಸ್ತಾಪುರ ಸೇರಿದಂತೆ ಹಲವರು ಪಾಲ್ಗೊಂಡರು.























