Home Uncategorized ಬೀದಿ ನಾಟಕದ ಮೂಲಕ ಹೆಚ್‌ಐವಿ ಬಗ್ಗೆ ಜನಜಾಗೃತಿ

ಬೀದಿ ನಾಟಕದ ಮೂಲಕ ಹೆಚ್‌ಐವಿ ಬಗ್ಗೆ ಜನಜಾಗೃತಿ

ಮಧುಗಿರಿ, ಅ. ೧೦- ಹೆಚ್‌ಐವಿ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕಗಳಿಂದ ಸಾರ್ವಜನಿಕರಲ್ಲಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಯುವ ಜನತೆ ಜವಾಬ್ದಾರಿಯಿಂದ ಒಂದು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ ಎಲ್ ಮಂಜು ಭಾರ್ಗವಿ ಹೇಳಿದರು


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸಾರ್ವಜನಿಕ ಆಸ್ಪತ್ರೆ ಮಧುಗಿರಿ ಸಹಯೋಗದೊಂದಿಗೆ ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಸಾರ್ವಜನಿಕರಿಗೆ ಎಚ್‌ಐವಿ ಕಾಯಿಲೆಯ ಅರಿವು ಮೂಡಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಧುಗಿರಿ ರಾಘವೇಂದ್ರ ಮಠದ ಹತ್ತಿರ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.


ಎಚ್‌ಐವಿ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಇಂತಹ ಬೀದಿ ನಾಟಕಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಎಂದರು.


ಸಾರ್ವಜನಿಕ ಆಸ್ಪತ್ರೆ ಮಧುಗಿರಿಯ ಡಾ. ಮೋಹನ್ ಕುಮಾರ್, ಆಪ್ತ ಸಮಾಲೋಚಕರಾದ ಸುಮಾಮಣಿ, ಡಾ. ಸ್ಯಾಮುಯೆಲ್, ಡಾ. ರೆಹಮಾನ್, ಆಯುಷ್ ವೈದ್ಯರಾದ ಡಾ. ಜನ್ಸಿ ಡಿಸೋಜಾ, ಡಾ. ಇಂದಿರಾ ನಾಗರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಸೇರಿದಂತೆ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಮಂಜುನಾಥ್, ಲೀಲಾವತಿ ಮಂಜುನಾಥ್ ಪೂಜಾರಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಸಂಪ್ರೀತ್ ಬಾಬಾ ಫಕ್ರುದ್ದೀನ್ ,ಮೇಘ ,ಲಕ್ಷ್ಮಿ, ಶಶಿಕಲಾ, ವೀಣಾ, ಮೋನಿಕಾ, ಬಿಂದು, ಸಂಧ್ಯಾ, ರೇಣುಕಾ, ಕರಿಷ್ಮಾ, ಕಾಮಾಕ್ಷಿ ಮತ್ತಿತರರು ಭಾಗವಹಿಸಿದ್ದರು.