ಕಲಬುರಗಿ:ಎಸ್‍ಐಆರ್ ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಡಾ.ಕಿರಣ್ ದೇಶಮುಖ, ಮಜರ್ ಆಲಂಖಾನ್, ಪ್ರವೀಣ್ ಪಾಟೀಲ ಹರವಾಳ, ರೇವು ನಾಯಕ ಬೆಳಮಗಿ, ನೀಲಕಂಠರಾವ ಮೂಲಗೆ, ಸುಭಾಷ ರಾಠೋಡ್, ಶಕೀಲ್ ಸರಡಗಿ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ರಾಜೀವ್ ಜಾನೆ, ಸಂತೋಷ ಪಾಟೀಲ ಡೊಣ್ಣೂರ, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಡಾ.ಮಹೇಶ್ ಕುಮಾರ್ ರಾಠೋಡ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.