(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.11:ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ತಾಲುಕು ಸಮಿತಿಯ ನೇತ್ರತ್ವದಲ್ಲಿ ದಲ್ಲಿ ನಿನ್ನೆ 5 ಸಂಜೆ ನಗರದ ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ಎಸ್ ಐ ಆರ್ ವಿರುದ್ದ ಹೋರಾಟವನ್ನು ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆಂದು ಪ್ರತಿಭಟನಾ ಧರಣಿ ನಡೆಸಿತು.
ದೆಹಲಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಪ್ಯಾಸಿಸ್ಟ್, ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿ ಹೇರಿಕೆ ವಿರೋಧಿಸಿ, ಜಂತರ್ ಮಂತರ್ ನಲ್ಲಿ ಸಿಜೆಪಿ ಪಕ್ಷ , ಹಾಗೂ ಎಡ ಪಕ್ಷಗಳ ವಿದ್ಯಾರ್ಥಿ ಯುವಜನ ಸಂಘಟನೆ ಗಳು ಭಾಗವಹಿಸಲು ಮುಂದಾಗಿದ್ದು ಪ್ರತಿಭಟನೆಗೆ ಅನುಮತಿಯನ್ನು ಪೋಲಿಸ್ ನವರು ನಿರಾಕರಣೆ ಮಾಡಿದ್ದರು.
ಇಂಟರ್ನೆಟ್ ಸಂಪೂರ್ಣ ವಾಗಿ ಬಂದ್ ಮಾಡಿದ್ದು, ಆ ಬಾಗದ ರೈಲ್ವೆ ಸ್ಟೇಷನ್ , ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದ್ದು ಬಸ್ ಇನ್ನಿತರ ಯಾವದೆ ವಾಹನಗಳು ಸಂಚಾರವನ್ನು ನಿರ್ಬಂಧ ಮಾಡಿದ್ದು ಅಘೋಷಿತ ಎಮರ್ಜೆನ್ಸಿ ಯನ್ನು ಬಲವಂತ ವಾಗಿ ಜಾರಿಮಾಡಿದೆ.
25 ಸಾವಿರಕ್ಕೂ ಹೆಚ್ಚು ಪೋಲಿಸರನ್ನು ಬಳಿಸಿ ಜಂತರ್ ಮಂತರ್ ಗೆ ಪ್ರವೇಶ ಮಾಡದೆ ಹಾಗೆ ಬಾರೀ ಬ್ಯಾರಿಕೇಡ್ ಗಳುನ್ನು ಅಳವಡಿಸಿದ್ದು ಆ ಪ್ರದೇಶದಲ್ಲಿ ಪ್ರವೇಶವನ್ನು ನಿರ್ಭಂದಿಸಿದ್ದರು. ಪ್ರತಿಭಟನೆಯನ್ನು ಮಾಡಲು ಜಂತರ್ ಮಂತರ್ ನಲ್ಲಿ ಪ್ರವೇಶಮಾಡಲು ಮುಂದಾಗಿದ್ದ ಸಿಪಿಎಂ ಪಕ್ದದ ಕಾರ್ಯದರ್ಶಿ ಎಮ್ ಎ ಬೇಬಿ, ಬೃಂದಾಕಾರೆಟ್, ಪಿನ್ ರಾಯ್ ವಿಜಯನ್ ಕೇರಳದ ಮಾಜಿ ಮುಖ್ಯಮಂತ್ರಿ, ಶೈಲಜಾ ಇವರನ್ನು ಬಂದಿಸಿರುವುದು ಖಂಡನೀಯ,
ದೆಹಿಲೆ ಯಲ್ಲಿ ಇರುವ ಪಕ್ದದ ಕಚೇರಿ ಎ ಕೆ ಜಿ ಭವನವನ್ನು ಮುತ್ತೆಗೆ ಹಾಕಿದ್ದು ಮತ್ತು ಪಕ್ಷದ ಕಚೇರಿ ಕಾಂ ಹರಿ ಕಿಷನ್ ಸುರ್ಜಿತ್ ಭವನದಲ್ಲಿ ವಿದ್ಯಾರ್ಥಿ,ಯುವಜನರು ಇದ್ದು ಅವರು ಹೊರಗಡೆ ಬರದೆ ಹಾಗೆ ಆ ಭವನಕ್ಕೆ ಹೊರಗಡೆಯಿಂದ ಪೋಲಿಸ್ ನವರು ಲಾಕ್ ಮಾಡಿ ಹೊರಗಡೆ ಬರದ ಹಾಗೆ ಬಲವಂತವಾಗಿ ನಿರ್ಬಂಧ ಸಿದ್ದರು.
ಸಿಜೆಪಿ ಪಕ್ಷದ ಮುಖಂಡರುನ್ನು ವಿಮಾನದಲ್ಲೆ ವಶಪಡಿಸಿಕೊಂಡದ್ದರು.ಆದರೂ ವಿದ್ಯಾರ್ಥಿ ಯುವಜನರು ಮತ್ತು ಎಡ ಪಕ್ಷ ದ ಮುಖಂಡರು ಹೋರಾಟ ದಲ್ಲಿ ಭಾಗವಹಿಸಿದ್ದರು.
ಸಿಪಿಐ(ಎಂ ) ಪಕ್ಷದ ಮುಖಂಡರನ್ನು ಬಂದಿಸಿರುವುದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಅಘೋಷಿತ ತುರ್ತುಪರಿಸ್ಥಿತಿ ಹೇರಿಕೆಯ ವಿರುದ್ದ , ಚುನಾವಣೆ ಮುಖ್ಯ ಆಯುಕ್ತ
ಜ್ಞಾನೇಷ ಕುಮಾರ್ ರಾಜೀನಾಮೆ ನೀಡಬೆಕು. ಎಸ್ ಐ ಆರ್ ಪಕ್ರಿಯ ರದ್ದು ಮಾಡ ಬೇಕು, ಓಟ್ ಚೋರಿ ಮಾಡಲು ಬಿಡುವದಿಲ್ಲಾ ಎಂದು ವಿರೂದಿಸಿ ಬಳ್ಳಾರಿ ನಗರದಲ್ಲಿ ಯಶಸ್ವಿಯಾಗಿ ಹೋರಾಟ ನಡಿದಿದೆ.
ಸಿಪಿಎಂ ಪಕ್ದದ ತಾಲುಕಾ ಕಾರ್ಯದರ್ಶಿ ಜೆ ಚಂದ್ರಕುಮಾರಿ ಅವರ ನೇತೃತ್ವದಲ್ಲಿ ನಡೆದ
ಹೋರಾಟದಲ್ಲಿ ವಿದ್ಯಾರ್ಥಿ ಯುವಜನರು, ಮಹಿಳಾ ಸಂಘಟನೆಗಳ ಕಾರ್ಯಕರ್ತ ರು ಭಾಗವಹಿಸಿದ್ದರು.
ಪಾಂಡು ರಂಗರಾಜ್,ಯು ಎರ್ರಿಸ್ವಾಮಿ,
ಅರುಣಾ, ಮಲ್ಲಮ್ಮ, ಎಮ್ ತಿಪ್ಪೆಸ್ವಾಮಿ, ಗಂಗಣ್ಣ ಪತ್ತಾರ್, ಗುರುಸಿದ್ದಮೂರ್ತಿ, ವರದರಾಜ್ವೆಂ, ಕಟೇಶ್, ನವೀನ್, ರಾಣಿ ಮುಂತಾದವರು ಇದ್ದರು.





















