
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.28: ನಗರದ ಸರ್ಕಾರಿ ಕಿವುಡ ಮತ್ತು ಮೂಗ ಬಾಲಕರ ಶಾಲೆಯ ಅಭಿವೃದ್ಧಿಯ 60 ಲಕ್ಷ ರೂಗಳ ಕಾಮಗಾರಿಗೆ ಸಂಸದರ ಪ್ರದೇಶಾಭಿವೃದ್ದಿ ಅನುದಾನದ ಯೋಜನೆಯಡಿ ನಿನ್ನೆ ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಚಾಲನೆ ನೀಡಿದರು.
ಈ ವೇಳೆ ಮೇಯರ್ ಗಾದೆಪ್ಪ,ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗಾರಾಜ. ಜಿಪಂಸಿಇಓ ಮಹಮ್ಮದ್ ಹ್ಯಾರೀಸ್ ಸುಮೇರ ಮೊದಲಾದವರು ಇದ್ದರು.

































