
ಹುಬ್ಬಳ್ಳಿ, ಆ೨೭: ಸಮಾಜಕ್ಕೆ ಸಮಾನತೆ ಮತ್ತು ಮಾನವೀಯ ಮೌಲ್ಯ ಬೋಧಿಸಿದ ಪ್ರವಾದಿ ಮಹ್ಮದ ಪೈಗಂಬರ ಸಾಮಾಜಿಕ ಪರಿವರ್ತನೆಯ ಹರಿಕಾರರು. ಅವರ ನಡೆ ನುಡಿ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ ಎಂದು ಅಂಜುಮನ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಹುಡಾ ಮಾಜಿ ಅಧ್ಯಕ್ಷರಾದ ಅನ್ವರ ಮುಧೋಳ ಹೇಳಿದರು.
ಅವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದರು.
ಮೆರವಣಿಯಲ್ಲಿ ಪ್ರೋ. ಏ ಜಿ ಸನದಿ, ಬಾಬಾಜಾನ ಮುಧೋಳ, ನಜೀರ ಅಹ್ಮದ ಕೋಲಕಾರ, ಎನ್ ಡಿ ಗದಕರ್, ಅಶ್ರಪ ಅಲೀ, ಶಾಕೀರ ಸನದಿ, ಸಿದ್ಧು ತೇಜಿ, ವಹಾಬ ಮುಲ್ಲಾ, ಯುಸೂಪ ಬಳ್ಳಾರಿ, ಗೈಬು ಹೊನ್ನಾಳಿ, ಮೌಲಾಸಾಬ ನದಾಫ, ಇಮ್ತಿಯಾಜ ಬಿಳೇಪಸಾದ ಮುಂತಾದವರು ಪಾಲ್ಗೊಂಡಿದ್ದರು.

































