
ಕಲಬುರಗಿ,ಆ.28: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತೆ ಕರ್ನಾಟಕ ರಾಜ್ಯದಲ್ಲಿ ಗರ್ಭಪಾತ ಪ್ರಮಾಣವು ಶೇ.7.5 ರಷ್ಟು ಇದೆ. ಕಳೆದ ಮೂರು ವರ್ಷಗಳಿಂದ ಯಾದಗಿರಿ ಜಿಲ್ಲೆಯ ಗರ್ಭಪಾತ ಪ್ರಮಾಣವು ಶೇ 2 ರಷ್ಟು ಇದ್ದು ರಾಷ್ಟ್ರದ ಹಾಗೂ ರಾಜ್ಯದ ಸರಾಸರಿಗಿಂತ ಅತ್ಯಂತ ಕಡಿಮೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು
ಯಾದಗಿರಿ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಷೆಡ್ಯೂಲ್-ಎಚ್ ಶ್ರೇಣಿಯ ಔಷಧಿ ವೈದ್ಯರ ಚೀಟಿ ಇಲ್ಲದೇ ಲಭ್ಯವಾಗುತ್ತಿರುವ ವರದಿಯ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಆದೇಶಿಸಲಾಗಿದ್ದು,ಪ್ರಾಥಮಿಕ ವರದಿ ಸ್ವೀಕೃತವಾಗಿದ್ದು,ಪರಿಶೀಲನಾ ಹಂತದಲ್ಲಿದೆ ಎಂದು ಸಚಿವರು ಉತ್ತರಿಸಿದರು.
































